ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾಸಮಿತಿಸದಸ್ಯರಿಗೆಮತ್ತುಯುವಕ–ಯುವತಿಯರಿಗೆ ಕೃತಜ್ಞತೆಗಳು.
ಬಲಿಪೂಜೆ ನಂತರ ಮರಿಯಮ್ಮನವರಸೈನ್ಯದಸಭೆಮತ್ತುಯುವಕ–ಯುವತಿಯರಿಗೆಸಭೆಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
ಕಳೆದ ಭಾನುವಾರ ನಮ್ಮ ಧರ್ಮಕೇಂದ್ರದಲ್ಲಿ ಒಂದು ದಿನದ ತಪಸ್ಸು ಕಾಲದ ಧ್ಯಾನಕೂಟವನ್ನು ನಡೆಸಿಕೊಟ್ಟ ಫಾ ಪ್ಯಾಟ್ರಿಕ್ ಜೋನಾಸ್ರವರಿಗೆ ಸರ್ವರ ಪರವಾಗಿ ಮತ್ತೊಮ್ಮೆ ಕೃತಜ್ಞತೆಗಳು, ಇದಕ್ಕೆ ಸಹಾಯ ಮಾಡಿದ ಕನ್ಯಾಭಗಿನಿಯರು, ಪಾಲನಾ ಸಮಿತಿ, ವಿನ್ಸೆಂಟ್ದೆಪೌಲ್ ಸಭೆ, ಯುವಬಳಗ, ಪೀಠಸೇವಕರು ಮತ್ತು ಪ್ರತ್ಯಕ್ಷ ಹಾಗೂ ಪರೋಕ್ಷ ಸಹಾಯ ಮಾಡಿದ ಎಲ್ಲರಿಗೂ ವಂದನೆಗಳು.
ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ 5ನೇವಲಯ (ಲೂರ್ದುಮಾತೆ ವಲಯ)ದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
19-03-2021, ಕಳೆದ ಶುಕ್ರವಾರದ ಶಿಲುಬೆಹಾದಿ ಮತ್ತು ಬಲಿಪೂಜೆಗೆ ಸಹಾಯಮಾಡಿದ 9ನೇ ಮತ್ತು 10ನೇ ವಲಯದ ಸರ್ವರಿಗೂ ಕೃತಜ್ಞತೆಗಳು.
ಬರುವ 26-03-2021,ಶುಕ್ರವಾರಸಂಜೆ 6-00 ಗಂಟೆಗೆಶಿಲುಬೆಹಾದಿಮತ್ತುಬಲಿಪೂಜೆ ಇರುವುದು ಹಾಗೂ ಕನ್ಯಾಸ್ತ್ರೀಯರು ಮತ್ತು ಮರಿಯಮ್ಮನವರ ಸದಸ್ಯರು ಸಹಾಯಮಾಡಲು ಆಹ್ವಾನಿಸುತ್ತೇನೆ, ದಾನಿಗಳು ಭೋಜನ ವ್ಯವಸ್ಥೆ ಮಾಡಿರುತ್ತಾರೆ, ದಯಮಾಡಿ ಭಾಗವಹಿಸಿ.
ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 6ನೇವಲಯ (ಫಾತಿಮಮಾತೆವಲಯ)ದಕುಟುಂಬಗಳನ್ನು ಆಹ್ವಾನಿಸುತ್ತೇನೆ.
ಬರುವ ಭಾನುವಾರ 28-03-2021, ಗರಿಗಳ ಭಾನುವಾರ. ಕಾರ್ಮೆಲ್ ಹೈಸ್ಕೂಲಿನ ಮುಂಭಾಗದಲ್ಲಿ ಗರಿಗಳನ್ನು ಆಶೀರ್ವದಿಸಿ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಬರೋಣ ಮತ್ತು ಎಂದಿನಂತೆ ಬಲಿಪೂಜೆ ನೆರವೇರುವುದು.