ಪ್ರಾರ್ಥನೆ

ಮಾರ್ಚ್ ೨೫, ೧೯೪೫ರಲ್ಲಿ ಮಾತೆ ಮರಿಯಳು ನೀಡಿದ ಮೊದಲ ದರ್ಶನದಲ್ಲೇ ಆಕೆಯ ಪ್ರಾರ್ಥನೆ ಆಗಲೇ ಎಲ್ಲರೂ ಬಲ್ಲರೇನೋ ಎಂಬಂತೆ ತಿಳಿಸಿದರು. “ಈ ಪ್ರಾರ್ಥನೆಯನ್ನು ಪ್ರಚುರಪಡಿಸು” ಎಂಬ ಆಸೆಯನ್ನು ವ್ಯಕ್ತಪಡಿಸಿದರು. ಆದರೂ, ದರ್ಶನವನ್ನು ಪಡೆದ ಇಡಾ ಪೀರ್ಡೆಮನ್ ಫೆಬ್ರವರಿ ೧೧, ೧೯೫೧ರಲ್ಲಷ್ಟೆ ಈ ಪ್ರಾರ್ಥನೆಯನ್ನು ಮಾತೆಯಿಂದ ಪಡೆದುದು.

ಎರಡನೇ ವ್ಯಾಟಿಕನ್ ಸಮ್ಮೇಳನದ ದಿನಗಳಲ್ಲಿ ಅಖಿಲ ಧರ್ಮಸಭೆಗೂ ಮತ್ತು ಇಡೀ ವಿಶ್ವಕ್ಕೂ ಬೇಕಾದ ದೀರ್ಘದರ್ಶನಗಳನ್ನು ಮಾತೆಯು ಈ ಪ್ರಾರ್ಥನೆಯ ಮೂಲಕ ನೀಡಿದರು. ಇಡಾ ತಿಳಿಸುತ್ತಾರೆ: “ಮಾತೆಯೊಂದಿಗೆ ಶಿಲುಬೆಯ ಮುಂದೆ ನಾನು ನಿಂತಿರುವಾಗ ಆಕೆ ಹೇಳಿದಳು, ’ನಾನು ಹೇಳಿದಂತೆ ಪುನರಾವರ್ತಿಸು…’ ’ಪ್ರಭು ಯೇಸಕ್ರಿಸ್ತರೇ, ಪರಮ ಪಿತನ ಪುತ್ರರೇ…’ ಆಕೆಯ ಧ್ವನಿ ಹೃದಯವನ್ನು ಕತ್ತರಿಸುವಂತಿತ್ತು. ನಾನು ಪ್ರಪಂಚದಲ್ಲಿ ಯಾರೂ ಹೀಗೆ ಪ್ರಾರ್ಥಿಸುವುದನ್ನು ಕೇಳಿಲ್ಲ. ’ನಿಮ್ಮ ಪವಿತ್ರಾತ್ಮರನ್ನು ಇಂದು ಕಳುಹಿಸಿರಿ’, ಇಂದು ಪದವನ್ನು ಒತ್ತಿ ಹೇಳಿದರು ಮತ್ತು ’ಎಲ್ಲಾ ರಾಷ್ಟ್ರಗಳ ಜನತೆಯಲ್ಲಿ ನಿಮ್ಮ ಆತ್ಮರು ರಾರಾಜಿಸಲಿ’ ಎಲ್ಲಾ ಎಂಬ ಪದವನ್ನು ಒತ್ತಿಹೇಳಲಾಯಿತು. ಆಕೆ ಕೊನೆಯಲ್ಲಿ ಬಹಳ ಸುಂದರವಾಗಿಯೂ ಗಂಭೀರವಾಗಿಯೂ ಆಮೆನ್ ಎಂದು ಹೇಳಿದರು. ನಾನು ಪ್ರತಿ ಪದವನ್ನು ಪುನರಾವರ್ತಿಸುತ್ತಿದ್ದರೆ ಈ ಪ್ರಾರ್ಥನ ನನ್ನೆದುರಿನಲ್ಲಿ ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿತ್ತು. ಆಗಲೇ ನಾನು ಇದು ಒಂದು ಪ್ರಾರ್ಥನೆ ಎಂದು ಗ್ರಹಿಸಿದ್ದುದು. ವಿಚಿತ್ರವೆಂದರೆ, ನಾನು ಬಾಯಿಪಾಠ ಮಾಡುವ ಅಗತ್ಯವೇ ಬೀಳಲಿಲ್ಲ, ನನ್ನ ನೆನಪಿನಲ್ಲಿ ತಾನೇ ಅಚ್ಚಳಿಯದೆ ಉಳಿದಿತ್ತು.

’ಪ್ರಭು ಯೇಸುಕ್ರಿಸ್ತರೇ,
ಪರಮಪಿತನ ಪುತ್ರರೇ,
ಭೂಲೋಕದ ಮೇಲೆ ನಿಮ್ಮ
ಪವಿತ್ರಾತ್ಮರನ್ನು ಈಗ ಕಳುಹಿಸಿರಿ.
ಎಲ್ಲಾ ರಾಷ್ಟ್ರಗಳ
ಜನತೆಯ ಹೃದಯಗಳಲ್ಲಿ
ನಿಮ್ಮ ಆತ್ಮರು ರಾರಾಜಿಸಲಿ.
ಸಕಲರನ್ನೂ ಹೀನಸ್ಥಿತಿ, ದುರಂತ
ಮತ್ತು ಯುದ್ಧಗಳಿಂದ ಸಂರಕ್ಷಿಸಿರಿ.
ಸಕಲ ರಾಷ್ಟ್ರಗಳ ರಾಣಿಯಾದ
ಮಾತೆ ಮರಿಯಳು ನಮ್ಮ
ಮಧ್ಯಸ್ಥಿಕಳಾಗಿರಲಿ, ಆಮೆನ್.

ಆಕೆ ಮತ್ತೆ ಮುಂದುವರಿಸಿದಳು, ’ಮಗೂ, ಈ ಪ್ರಾರ್ಥನೆ ಚಿಕ್ಕದಾಗಿಯೂ, ಸುಲಭವಾಗಿಯೂ ಇರುವುದರಿಂದ ತಮ್ಮ ಸ್ವಂತ ಭಾಷೆಯಲ್ಲಿಯೇ ತಮ್ಮ ಶಿಲುಬೆಯ ಮುಂದೆ ಎಲ್ಲರೂ ಹೇಳಲಿ, ಶಿಲುಬೆ ಇಲ್ಲದಿದ್ದಲ್ಲಿ ವೈಯಕ್ತಿಕವಾಗಿಯೇ ಹೇಳಲಿ’.

ಬಿರುದು

“ಈ ಹೆಸರಿನಿಂದಲೇ ಆಕೆ ಪ್ರಪಂಚವನ್ನು ರಕ್ಷಿಸುವಳು” (ಮಾರ್ಚ್ ೨೦, ೧೯೪೫) ಆಕೆ ನೀಡಿದ ದರ್ಶನಗಳಲ್ಲಿ ಸುಮಾರು ೧೫೦ ಬಾರಿ ತನ್ನ ಈ ಹೆಸರನ್ನು ಸೂಚಿಸುತ್ತಾಳೆ. ಮಾರ್ಚ್ ೨೫, ೧೯೪೫ರಲ್ಲಿ ಆಕೆ ’ನನ್ನನ್ನು ರಾಣಿ, ಮಾತೆ’ ಎನ್ನುವರು ಎಂದು ತಿಳಿಸಿದ್ದಳು. ಆದರೆ, ನವೆಂಬರ್ ೧, ೧೯೫೦ರಲ್ಲಿ ಪೋಪ್೧೨ನೇ ಪಿಯುಸ್ ರವರು ಮಾತೆಯು ಸ್ವರ್ಗಸ್ವೀಕೃತಳು ಎಂಬ ಸತ್ಯವನ್ನು ಧರ್ಮಸಭೆಯ ಸಿದ್ದಾಂತವಾಗಿ ಘೋಷಿಸಿದ ನಂತರ ಅದೇ ನವೆಂಬರ್ ೧೬, ೧೯೫೦ರಂದು ನೀಡಿದ ದರ್ಶನದಲ್ಲಿ ಮಾತೆಯು ನುಡಿದಳು: “ಮಗೂ, ನಾನು ರಾಷ್ಟ್ರಗಳ ರಾಣಿ ಎಂಬುದಾಗಿ ಸಂಬೋಧಿಸಲ್ಪಡಬೇಕು ಎಂಬುದಕ್ಕಾಗಿ ನಾನು ಈ ಭೂಗೋಳದ ಮೇಲೆ ನಿಂತಿದ್ದೇನೆ”. “ಯೇಸುಕ್ರಿಸ್ತರು ಸ್ವರ್ಗಾರೋಹಣರಾಗುವಾಗ ಮಾತೆ ಮರಿಯಳನ್ನು ರಾಷ್ಟ್ರಗಳ ನಾಯಕಿಯಾಗಿಸಿದರು…”ಅಮ್ಮಾ, ಇಗೋ ನಿನ್ನ ಮಗನು; ಮಗನೇ, ಇಗೋ ನಿನ್ನ ತಾಯಿ” ಎನ್ನುವ ಒಂದೇ ಹೇಳಿಕೆಯಲ್ಲಿ ಆಕೆ ಎಲ್ಲಾ ರಾಷ್ಟ್ರಗಳ ರಾಣಿ ಎಂಬ್ ಹೊಸ ಬಿರುದನ್ನು ಪಡೆದಳು” (ಅಕ್ಟೋಬರ್ ೫, ೧೯೫೨).

Writing material Courtesy: https://www.de-vrouwe.info/en/the-title
Source: Fr. Paul Maria Sigl,
Die Frau aller Völker ‘Miterlöserin Mittlerin Fürsprecherin
‘Amsterdam – Rome, March 25, 1998

ಪ್ರತಿಮೆ

ದರ್ಶನದಲ್ಲಿ ತೋರಿದ ಆಕೆಯ ಭಾವಚಿತ್ರದಲ್ಲಿರುವ ಆರು ವಿಶೇಷತೆಗಳನ್ನು ಮಾತೆಯೇ ವಿವರಿಸಿದ್ದಾರೆ:

  • ಆಕೆಯಿಂದ ಬೇರ್ಪಡಿಸಲಾರದ ತಮ್ಮ ಪುತ್ರನ ಶಿಲುಬೆಯ ಮುಂದೆ ನಿಂತಿರುವ ಆಕೆಯ ಹಿಂದಿನಿಂದ ಬೆಳಕಿನ ಕಿರಣಗಳು ತೋರುತ್ತಿವೆ.

  • ಆಕೆಯ ಸೊಂಟದ ಸುತ್ತ ಕಟ್ಟಿರುವ ವಸ್ತ್ರದ ಬಗ್ಗೆ ಆಕೆಯೇ ವಿವರಿಸುತ್ತಾಳೆ: “ಅದರ ವಿಷಯವಾಗಿ ಸರಿಯಾಗಿ ಕೇಳಿ. ಇದು ಆತನ ಶವಕ್ಕೆ ಸುತ್ತಿದ್ದ ನಾರುಮಡಿ. ನಾನು ನನ್ನ ಪುತ್ರನ ಶಿಲುಬೆಯ ಮುಂದೆ ನಿಂತಿದ್ದಾಕೆ” (ಏಪ್ರಿಲ್ ೧೫, ೧೯೫೧).

  • ಆಕೆಯ ಕರಗಳಲ್ಲಿ ತೇಜೋಮಯ ಗಾಯಗಳಿವೆ; ಇವುಗಳ ಮೂಲಕ ತಾನು ಮಾನವರ ಜೀವೋದ್ದಾರಕ್ಕಾಗಿ ತನ್ನ ಪುತ್ರನೊಂದಿಗೆ ಆತನ ಶರೀರ ಮತ್ತು ಆತ್ಮದಲ್ಲಿ ಯಾತನೆಯನ್ನು ಅನುಭವಿಸಿದಳು ಎಂದು ವಿವರಿಸುತ್ತಾಳೆ.

  • ತದನಂತರ, ಇಡಾಳಿಗೆ ತಾನು ಸರ್ವ ಆಶೀರ್ವಾದಗಳ ಮಧ್ಯಸ್ಥಿಕಳು ಎಂಬುದನ್ನು ತನ್ನ ಕರಗಳನ್ನು ತೋರಿಸಿ ನುಡಿಯುತ್ತಾಳೆ: “ನನ್ನ ಕರಗಳನ್ನು ನೋಡಿ ಏನು ಕಾಣುತ್ತಿಯೋ ಅದನ್ನು ಸಾರು”. ಆ ಕರಗಳ ಮಧ್ಯದಲ್ಲಿ ಗಾಯದ ಗುರುತು ಇತ್ತು. ಅಲ್ಲಿಂದ ಮೂರು ಬೆಳಕಿನ ಕಿರಣಗಳು ಬಂದು, ಅಲ್ಲಿದ್ದ ಕುರಿಹಿಂಡಿನ ಮೇಲೆ ಬೀಳುತ್ತಿತ್ತು. ಆಕೆ ನಸುನಗುತ್ತಾ, “ಈ ಮೂರು ಕಿರಣಗಳು ವರಪ್ರಸಾದ, ರಕ್ಷಣೆ ಮತ್ತು ಶಾಂತಿಯ ಕಿರಣಗಳು” ಎಂದಳು (ಮೇ ೩೧, ೧೯೫೧); ಪಿತನಿಂದ ಆಶೀರ್ವಾದ, ಸುತನಿಂದ ರಕ್ಷಣೆ ಮತ್ತು ಪವಿತ್ರಾತ್ಮರಿಂದ ಶಾಂತಿ ಇದು ಅದರ ಅರ್ಥ” ಎಂದಳು.

  • “ನಾನು ಈ ಭೂಗೋಳದ ಮೇಲೆ ಕಾಲುಗಳನ್ನು ಸ್ಥಿರವಾಗಿ ಊರಿದ್ದೇನೆ, ಏಕೆಂದರೆ, ಈ ಸಮಯದಲ್ಲಿ ಪಿತನು ಮತ್ತು ಸುತನು ನನ್ನನ್ನು ಸಹರಕ್ಷಕಿಯಾಗಿ, ಮಧ್ಯಸ್ಥಿಕಳಾಗಿ ಮತ್ತು ಪರವಾದಿಯಾಗಿ ಪ್ರಪಂಚಕ್ಕೆ ತರಬಯಸುತ್ತಾರೆ” (ಮೇ ೩೧, ೧೯೫೧). “ಈ ಸಮಯ ನಮ್ಮ ಸಮಯವಾಗಿದೆ” (ಜುಲೈ ೨, ೧೯೫೧).

  • ಬೈಬಲ್ಲಿನಲ್ಲಿರುವಂತೆ, ಮಾತೆಯು ತನ್ನ ಸುತ್ತಾ ಪ್ರಪಂಚದ ಎಲ್ಲಾ ದೇಶಗಳು ಮತ್ತು ಜನಾಂಗಗಳು ಪ್ರವಾದನೆಯ ಕುರಿಮಂದೆ ಸೇರುವುದನ್ನು ವ್ಯಕ್ತಪಡಿಸುತ್ತಾಳೆ. ನಂತರ, ಆಕೆ ನುಡಿಯುತ್ತಾಳೆ: "ಅವುಗಳ ಮೊಣಕಾಲೂರಿ ಈ ಲೋಕದ ಕೇಂದ್ರಬಿಂದುವಾದ ಶಿಲುಬೆಯನ್ನು ಈಕ್ಷಿಸಿ ಸಮಾಧಾನ ಪಡೆಯುತ್ತಾರೆ” (ಮೇ ೩೧. ೧೯೫೧).