ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
08-09-2020,ಮಂಗಳವಾರಬೆಳಿಗ್ಗೆ 7-00ಕ್ಕೆಮಾತೆ ಮರಿಯಳ ಜನನೋತ್ಸವದ ಹಬ್ಬದ ಬಲಿಪೂಜೆ ಇರುತ್ತದೆ.
ಕುಟುಂಬ ವರದಿ ಪುಸ್ತಕಗಳನ್ನು ನೀಡಲು ಮಾಹಿತಿ ಸಂಗ್ರಹಿಸಲು ನಿಮಗೆ ನೀಡಿದ್ದ ಪತ್ರಗಳಲ್ಲಿ ಮಾಹಿತಿ ಭರ್ತಿ ಮಾಡಿ ವಲಯದ ಪಾಲನ ಸಮಿತಿಯ ಸದಸ್ಯರ ಮೂಲಕ ಹಿಂತಿರುಗಿಸುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಕುಟುಂಬ ಪುಸ್ತಕಗಳನ್ನು ಪಡೆದಿರುವವರು ಕುಟುಂಬ ವಂತಿಗೆಯನ್ನು ಸಲ್ಲಿಸಬಹುದಾಗಿದೆ (ಮಾಸಿಕ ರೂ 50/- ಮತ್ತು ವಾರ್ಷಿಕ ರೂ 600/-).