ತಪಸ್ಸು ಕಾಲದ 3ನೇ ಭಾನುವಾರ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
- ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ–ಯುವತಿಯರಿಗೆ ಕೃತಜ್ಞತೆಗಳು.
- ಬಲಿಪೂಜೆ ನಂತರ ಮರಿಯಮ್ಮನವರ ಸೈನ್ಯದ ಸಭೆ ಮತ್ತು ಯುವಕ–ಯುವತಿಯರಿಗೆ ಸಭೆ ಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
- ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ 3ನೇ ವಲಯ (ಜಪಮಾಲೆಮಾತೆ ವಲಯ)ದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
- 05-03-2021, ಕಳೆದ ಶುಕ್ರವಾರದ ಶಿಲುಬೆಹಾದಿ ಮತ್ತು ಬಲಿಪೂಜೆಗೆ ಸಹಾಯಮಾಡಿದ 5ನೇ ಮತ್ತು 6ನೇ ವಲಯದ ಸರ್ವರಿಗೂ ಕೃತಜ್ಞತೆಗಳು.
- ಬರುವ 12-03-2021 ಶುಕ್ರವಾರ ಬೆಳಿಗ್ಗೆ ಬಲಿಪೂಜೆ ಇರುವುದಿಲ್ಲ. ಸಂಜೆ 6-00 ಗಂಟೆಗೆ ಶಿಲುಬೆಹಾದಿ ಮತ್ತು ಬಲಿಪೂಜೆ ಇರುವುದು ಹಾಗೂ 7ನೇ ಮತ್ತು 8ನೇ ವಲಯದ ಸದಸ್ಯರು ಸಹಾಯಮಾಡಲು ಆಹ್ವಾನಿಸುತ್ತೇನೆ, ದಾನಿಗಳು ಭೋಜನ ವ್ಯವಸ್ಥೆ ಮಾಡಿರುತ್ತಾರೆ, ದಯಮಾಡಿ ಸಹಕರಿಸಿ.
- ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 4ನೇ ವಲಯ (ಕಾರ್ಮೆಲ್‍ಮಾತೆ ವಲಯ)ದ ಕುಟುಂಬಗಳನ್ನು ಆಹ್ವಾನಿಸುತ್ತೇನೆ.
- ಬರುವ 14-03-2021, ಭಾನುವಾರ ನಮ್ಮ ಧರ್ಮಕೇಂದ್ರದಲ್ಲಿ ಒಂದು ದಿನದ ತಪಸ್ಸು ಕಾಲದ ಧ್ಯಾನಕೂಟವನ್ನು ನಡೆಸುತ್ತೇವೆ. ಚಿಕ್ಕಮಗಳೂರು ಧರ್ಮಕ್ಷೇತ್ರದ ಫಾ ಪ್ಯಾಟ್ರಿಕ್ ಜೋನಾಸ್‍ರವರು ಇದನ್ನು ನಡೆಸಿಕೊಡುತ್ತಾರೆ. ಸರ್ವರೂ ಭಾಗವಹಿಸಿ, ಇತರರಿಗೂ ತಿಳಿಸಿ ತಪಸ್ಸುಕಾಲದ ವರಪ್ರಸಾದವನ್ನು ಪಡೆದುಕೊಳ್ಳೋಣ.
- ಧನ್ಯವಾದಗಳು
- ಸಹಿ/-