
ಸಂಕ್ಷಿಪ್ತ ಇತಿಹಾಸ
ಮನುಕುಲ ಮಾತೆ ಧರ್ಮಕೇಂದ್ರವನ್ನು ೨೬ ಮೇ, ೨೦೧೯ ಭಾನುವಾರದಂದು ಮೈಸೂರಿನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ.ಕೆ.ಎ.ವಿಲಿಯಂರವರು, ೭೫ ವರ್ಷಗಳ ಸುದೀರ್ಘ ಇತಿಹಾಸವುಳ್ಳ ಸಂತ ಜೋಸೆಫರ ಧರ್ಮಕೇಂದ್ರದಿಂದ ವಿಭಜಿಸಿ ಈ ನೂತನ ಧರ್ಮಕೇಂದ್ರವನ್ನು ಸ್ಥಾಪಿಸಿದರು.
ಇದು ’ಮನುಕುಲ ಮಾತೆ’ಗೆ ಸಮರ್ಪಿತವಾದ ಧರ್ಮಕ್ಷೇತ್ರದ ಮೊದಲ ಧರ್ಮಕೇಂದ್ರ.
೨೬ ಮೇ, ೨೦೨೦ರಂದು ಧರ್ಮಕೇಂದ್ರ ಸ್ಥಾಪನೆಯ ಮೊದಲನೆ ವರ್ಷದ ಸವಿನೆನಪಿಗಾಗಿ ಈ ವೆಬ್ ಸೈಟ್ ನ್ನು ಪ್ರಾರಂಭಿಸಲಾಯಿತು.