ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾಸಮಿತಿಸದಸ್ಯರಿಗೆಮತ್ತುಯುವಕ–ಯುವತಿಯರಿಗೆ ಕೃತಜ್ಞತೆಗಳು.
ಬಲಿಪೂಜೆ ನಂತರ ಮರಿಯಮ್ಮನವರಸೈನ್ಯದಸಭೆಮತ್ತುಯುವಕ–ಯುವತಿಯರಿಗೆಸಭೆಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ 6ನೇವಲಯ (ಫಾತಿಮಮಾತೆ ವಲಯ)ದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
26-03-2021, ಕಳೆದ ಶುಕ್ರವಾರದ ಶಿಲುಬೆಹಾದಿ ಮತ್ತು ಬಲಿಪೂಜೆಗೆ ಸಹಾಯಮಾಡಿದ ಕನ್ಯಾಸ್ತ್ರೀಯರು ಮತ್ತು ಮರಿಯಮ್ಮನವರ ಸೈನ್ಯದ ಸದಸ್ಯರಿಗೆ ಕೃತಜ್ಞತೆಗಳು.
ಬರುವ 01-04-2021, ಪವಿತ್ರ ಗುರುವಾರ. ಸಂಜೆ 6-00 ಗಂಟೆಗೆ ಪವಿತ್ರ ಗುರುವಾರದ ಸಾಂಗ್ಯಗಳು ನಡೆಯುವುದು. ನಂತರ ಪ್ರಭುವಿನೊಡನೆ ರಾತ್ರಿ 12-00 ಗಂಟೆಯವರೆಗೆ ತಂಡಗಳೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಬಹುದು. ಶುಭಶುಕ್ರವಾರದ ಬೆಳಗ್ಗೆ ಮೌನ ಪ್ರಾರ್ಥನೆಗಳು ಮಾತ್ರ ಇರುತ್ತವೆ, ವೈಯಕ್ತಿಕವಾಗಿ ಮಾತ್ರ ಬಂದು ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತೇನೆ.
ಬರುವ 02-04-2021,ಶುಭಶುಕ್ರವಾರ,ಬೆಳಿಗ್ಗೆ 11-00 ಗಂಟೆಗೆಶಿಲುಬೆಯಹಾದಿ ಮತ್ತು ಸಂಜೆ 4-00 ಗಂಟೆಗೆ ಇತರ ಸಾಂಗ್ಯಗಳನ್ನು ಗಾಯನವೃಂದ, ಯುವಕರ ಬಳಗಮತ್ತುಪಾಲನಾ ಸಮಿತಿಯವರು ನಡೆಸಿಕೊಡುವಂತೆ ಕೇಳಿಕೊಳ್ಳುತ್ತೇನೆ.
ಬರುವ 03-04-2021, ಶನಿವಾರ, ಸಂಜೆ 10-30ಕ್ಕೆ ಪಾಸ್ಕ ರಾತ್ರಿಯ ಸಾಂಗ್ಯಗಳು ಪ್ರಾರಂಭವಾಗುತ್ತದೆ.
ಬರುವ 04-04-2021, ಭಾನುವಾರ, ಬೆಳಗ್ಗೆ 8-30ಕ್ಕೆ ಎಂದಿನಂತೆ ಬಲಿಪೂಜೆ ಇರುತ್ತದೆ. ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 7ನೇವಲಯ (ಅಮಲೋದ್ಭವಿಮಾತೆವಲಯ)ದಕುಟುಂಬಗಳನ್ನು ಆಹ್ವಾನಿಸುತ್ತೇನೆ.