ಪ್ರಕಟಣೆಗಳು 21-02-2021

ತಪಸ್ಸು ಕಾಲದ 1ನೇ ಭಾನುವಾರ

 • 22-02-2021, ಸೋಮವಾರ ಸಂತ ಪೇತ್ರರ ಅಧಿಕಾರ ಪೀಠದ ಸ್ಮರಣೆ
 • 23-02-2021, ಮಂಗಳವಾರ ಸ್ಮರಣೆ: ಸಂತ ಪೋಲಿಕಾರ್ಪ್
 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕಯುವತಿಯರಿಗೆ ಕೃತಜ್ಞತೆಗಳು.
 • ಬಲಿಪೂಜೆ ನಂತರ ಮರಿಯಮ್ಮನವರ ಸೈನ್ಯದ ಸಭೆ ಮತ್ತು ಯುವಕಯುವತಿಯರಿಗೆ ಸಭೆ ಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.

 

 • ಬರುವ ಭಾನುವಾರ, 28-02-2021 ಕಾರ್ಮೆಲ್‍ ಕಾನ್ವೆಂಟ್‍ನ ಶಾಲೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೆಗೆದುಕೊಳ್ಳುವುದರಿಂದ ಬಲಿಪೂಜೆ ಬೆಳಿಗ್ಗೆ 7-00 ಗಂಟೆಗೆ ಇರುತ್ತದೆ, ದಯಮಾಡಿ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
 • ಬರುವ 26-02-2021 ಶುಕ್ರವಾರ ಸಂಜೆ 6-00 ಗಂಟೆಗೆ ಶಿಲುಬೆಹಾದಿ ಮತ್ತು ಬಲಿಪೂಜೆ ಇರುವುದು ಹಾಗೂ 3ನೇ ಮತ್ತು 4ನೇ ವಲಯದ ಸದಸ್ಯರನ್ನು ಆರಾಧನಾ ವಿಧಿಗಳಲ್ಲಿ ಸಹಾಯಮಾಡಲು ಆಹ್ವಾನಿಸುತ್ತೇನೆ. ಆನಂತರ, ಭೋಜನ ವ್ಯವಸ್ಥೆ ಮಾಡಲು ಯಾರಾದರೂ ಇಚ್ಛಿಸಿದಲ್ಲಿ ದಯಮಾಡಿ ನನಗೆ ಅಥವಾ ಪಾಲನಾ ಸಮಿತಿಯ ಖಂಜಾಚಿ ಶ್ರೀ ರಾಯಪ್ಪ ಅವರಿಗೆ ತಿಳಿಸಿರಿ.
 • ಕಳೆದ 19-02-2021, ಶುಕ್ರವಾರ ದಂದು ಶಿಲುಬೆಹಾದಿ ಮತ್ತು ಬಲಿಪೂಜೆಗೆ ಸಹಾಯಮಾಡಿದ 1ನೇ ಮತ್ತು 2ನೇ ವಲಯದ ಸರ್ವರಿಗೂ ಕೃತಜ್ಞತೆಗಳು,
 • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ1ನೇ ವಲಯ (ಸ್ವರ್ಗರಾಣಿ ವಲಯ)ದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
 • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು 2ನೇ ವಲಯ (ದೇವಮಾತೆ ವಲಯ) ಕುಟುಂಬಗಳನ್ನು ಆಹ್ವಾನಿಸುತ್ತೇನೆ.
 • ಧನ್ಯವಾದಗಳು
 • ಸಹಿ/-