ಪ್ರಭುವಿನ ಸ್ನಾನದೀಕ್ಷೆಯ ಹಬ್ಬ
- 13-01-2021, ಬುಧವಾರ ಸಂತ ಹಿಲ್ಲೆರಿ ಸ್ಮರಣೆ
- 14-01-2021, ಗುರುವಾರ ಆಶೀರ್ವದಿತ ದೇವಸಗಾಯಂ ಸ್ಮರಣೆ
- 16-01-2021, ಶನಿವಾರ ಸಂತ ಜೋಸೆಫ್ ವಾಜ್ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
- ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
- ಬಲಿಪೂಜೆ ನಂತರ ಮರಿಯಮ್ಮನವರ ಸೈನ್ಯದ ಸಭೆ ಮತ್ತು ಯುವಕ–ಯುವತಿಯರಿಗೆ ಸಭೆ ಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
- ಬರುವ ಭಾನುವಾರ, 17-01-2021ರಂದು ಕುಟುಂಬ ಬೈಬಲ್ ಕ್ವಿಜ್ನ್ನು ಆಯೋಜಿಸುತ್ತಿದ್ದೇವೆ. ಪೂರ್ತಿ ಉತ್ತರಿಸಿ ಮೊದಲು ನೀಡಿದ ಕುಟುಂಬಕ್ಕೆ ವಿಶೇಷ ಬಹುಮಾನ ಮತ್ತು ಪೂರ್ತಿ ಸರಿ ಉತ್ತರ ನೀಡಿದ ಮೂರು ಕುಟುಂಬಕ್ಕೆ ಬಹುಮಾನವನ್ನು ನೀಡಲಾಗುವುದು. ಉತ್ತರ ಪತ್ರಿಕೆಯನ್ನು 31-01-2021 (15 ದಿನಗಳ ಸಮಯ)ರೊಳಗೆ ಹಿಂತಿರುಗಿಸಬೇಕು. (ಪ್ರಶ್ನೆಗಳನ್ನು ಆದಿಕಾಂಡ, ವಿಮೋಚನಾಕಾಂಡ, ಸಂಖ್ಯಾಕಾಂಡ, ಯಾಜಕಕಾಂಡ ಮತ್ತು ಧರ್ಮೋಪದೇಶಕಾಂಡದಿಂದ ಆರಿಸಿಕೊಳ್ಳಲಾಗಿದೆ).
- ಬರುವ ಶನಿವಾರ, 16-01-2021ರಂದು ಬಲಿಪೂಜೆ ಸಂಜೆ 6-00 ಗೆ ಇರುತ್ತದೆ.
- ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ವಿನ್ಸೆಂಟ್ ದೆ ಪೌಲ್ ಸಭೆಯ ಸದಸ್ಯರಿಗೆ ಮತ್ತು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
- ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಮನುಕುಲ ಮಾತೆ ಗಾಯನ ವೃಂದದ ಸದಸ್ಯರನ್ನು ಆಹ್ವಾನಿಸುತ್ತೇನೆ.
ಧನ್ಯವಾದಗಳು
ಸಹಿ/-