ಪ್ರಕಟಣೆಗಳು 27-12-2020

ಪವಿತ್ರ ಕುಟುಂಬದ ಹಬ್ಬ

 • 28-12-2020, ಸೋಮವಾರ ಪಾವನಗಳ ಶಿಶುಗಳ ಹಬ್ಬ
 • 29-12-2020, ಮಂಗಳವಾರ ಸಂತ ಥಾಮಸ್‍ ಬೆಕೆಟ್‍ರ ಸ್ಮರಣೆ
 • 01-01-2021, ಶುಕ್ರವಾರ ದೇವಮಾತೆ ಮರಿಯಳ ಹಬ್ಬ
 • 02-01-2021, ಶನಿವಾರ ಮಹಾ ಸಂತ ಬೆಸಿಲರ ಸ್ಮರಣೆ

 

 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.

 

 • ಬರುವ 31-12-2020ರಂದು ರಾತ್ರಿ 11-00 ಗಂಟೆಗೆ ಪರಮಪ್ರಸಾದಕ್ಕೆ ಕೃತಜ್ಞತಾ ಆರಾಧನೆ ಮತ್ತು 11-45 ಗಂಟೆಗೆ ನೂತನ ವರ್ಷಕ್ಕೆ ಗಾಯನ ಬಲಿಪೂಜೆಯೊಂದಿಗೆ ಪಾದಾರ್ಪಣೆ.
 • ಬರುವ 01-01-2021 ಶುಕ್ರವಾರ ದಂದು ಬೆಳಿಗ್ಗೆ 8.30 ಗಂಟೆಗೆ ದೇವಮಾತೆ ಮರಿಯಳ ಹಬ್ಬದ ಗಾಯನ ಬಲಿಪೂಜೆ.
 • 01-01-2021 ತಿಂಗಳ ಮೊದಲನೆ ಶುಕ್ರವಾರ ಅಂದಿನ ಬದಲಿಗೆ ಶನಿವಾರ, 02-01-2021 ರಂದು ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು.
 • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಮನುಕುಲ ಮಾತೆ ಮರಿಯಮ್ಮನವರ ಸೈನ್ಯದ ಸದಸ್ಯರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
 • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಪ್ರಿಸನ್‍ ಮಿನಿಸ್ಟ್ರಿ ತಂಡದ ಸದಸ್ಯರನ್ನು ಆಹ್ವಾನಿಸುತ್ತೇನೆ.
 • ಧನ್ಯವಾದಗಳು
 • ಸಹಿ/-