ಆಗಮನ ಕಾಲದ 4ನೇ ವಾರ
- 26-12-2020, ಸೋಮವಾರ ಸಂತ ಸ್ತೇಫನರ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
- ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
- ಇಂದು, 20-12-2020ರಂದು ಬಲಿಪೂಜೆಯ ನಂತರ ಒಂದು ಘಂಟೆ ಸಮಯ ಪರಮಪ್ರಸಾದ ಆರಾಧನೆ ಇರುತ್ತದೆ, ಈ ಸಮಯದಲ್ಲಿ ಪಾಪವಿಖ್ಯಾಪನೆಯನ್ನು ಕೇಳಲು ಗುರುಗಳು ಲಭ್ಯವಿರುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ರಿಸ್‍ಮಸ್ ಹಬ್ಬಕ್ಕೆ ಆಂತರಿಕವಾಗಿ ಆಧ್ಯಾತ್ಮಿಕವಾಗಿ ಸಿದ್ದರಾಗುವಂತೆ ಕೇಳಿಕೊಳ್ಳುತ್ತೇನೆ. ಯುವಕರು ಉಪಹಾರವನ್ನು ಆಯೋಜಿಸಿದ್ದಾರೆ, ದಯಮಾಡಿ ಸ್ವೀಕರಿಸಿರಿ.
- ಬರುವ 23-12-2020, ಬುಧವಾರದಂದು ಸಂಜೆ 5-30 ಗಂಟೆಗೆ ನಮ್ಮ ಧರ್ಮಕೇಂದ್ರದ ಗಾಯನ ವೃಂದವು ಬೆಂಗಳೂರಿನ ಒಡನಾಡಿ ತಂಡದ ಜೊತೆಯಲ್ಲಿ ಕ್ಯಾರೋಲ್ಸ್ ಗಾಯನ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಇದು ಫೇಸ್‍ಬುಕ್ ಮತ್ತು ಯೂಟ್ಯೂಬ್‍ನಲ್ಲಿ ನೇರಪ್ರಸಾರವಾಗುತ್ತದೆ. ಇದನ್ನು ಈಕ್ಷಿಸಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.
- ಬರುವ 24-12-2020ರಂದು ರಾತ್ರಿ 11-00 ಗಂಟೆಗೆ ಕ್ಯಾರೊಲ್ಸ್ ಹಾಡುಗಳ ಗಾಯನ ಮತ್ತು 11-45 ಗಂಟೆಗೆ ಕ್ರಿಸ್‍ಮಸ್ ಹಬ್ಬದ ವಿಜೃಂಭಣೆಯ ಗಾಯನ ಬಲಿಪೂಜೆ.
- ಬರುವ 25-12-2020ರಂದು ಬೆಳಿಗ್ಗೆ 8.30 ಗಂಟೆಗೆ ಕ್ರಿಸ್‍ಮಸ್ ಹಬ್ಬದ ಬೆಳಗಿನ ಗಾಯನ ಬಲಿಪೂಜೆ.
- ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಮನುಕುಲ ಮಾತೆ ಯುವ ಬಳಗವನ್ನು ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
- ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಮನುಕುಲ ಮಾತೆ ಮರಿಯಮ್ಮನವರ ಸೈನ್ಯದ ಸದಸ್ಯರನ್ನು ಆಹ್ವಾನಿಸುತ್ತೇನೆ.
- ಧನ್ಯವಾದಗಳು
- ಸಹಿ/-