29-11-2020ರ ಪಾಲನಾ ಸಮಿತಿ ಸಭೆಯ ತೀರ್ಮಾನಗಳು

 

 • ಪಾಲನಾ ಸಮಿತಿಯ ಸದಸ್ಯರು ತಮ್ಮ ಆಯ್ಕೆ ದೇವರಿಂದಲೇ ಆದುದು ಮತ್ತು ಧರ್ಮಕೇಂದ್ರದ ಒಳಿತಿಗಾಗಿ ಗುರುಗಳೊಡನೆ ಶ್ರಮಿಸುವುದು ತಮ್ಮ ಕರ್ತವ್ಯ ಎಂಬುದನ್ನು ಮನಗಂಡು ಧರ್ಮಸಭೆಯ ಮತ್ತು ಗುರುಗಳ ಮಾರ್ಗದರ್ಶನ, ಆಧ್ಯಾತ್ಮಿಕ ತಿಳುವಳಿಕೆ, ತಿದ್ದುಪಡಿಗಳನ್ನು ತಾವೂ ಅರ್ಥೈಸಿಕೊಂಡು ಇತರರನ್ನೂ ವಿಶ್ವಾಸದಲ್ಲಿಯೂ, ದೈವಪ್ರೀತಿಯಲ್ಲಿಯೂ ಮುನ್ನಡೆಸುತ್ತಾರೆ.
 • ಪಾಲನಾ ಸಮಿತಿಯ ಸದಸ್ಯರಿಗೆ ತೋರುವ ಗೌರವ ಧರ್ಮಸಭೆಗೂ ಮತ್ತು ಅದರ ಮುಖಂಡರಿಗೂ ಎಂಬುದನ್ನೂ ಸರ್ವರೂ ಅರಿಯಬೇಕು.
 • ಪಾಲನಾ ಸಮಿತಿಯ ಸದಸ್ಯರು ತಮ್ಮ ವಲಯದಲ್ಲಿರುವ ಎಲ್ಲಾ ಕುಟುಂಬಗಳ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆದುದರಿಂದ, ವಲಯದ ಎಲ್ಲಾ ಸದಸ್ಯರು ಧರ್ಮಕೇಂದ್ರದ ಆಧ್ಯಾತ್ಮಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅವರ ಮಾರ್ಗದರ್ಶನವನ್ನು ಇತರರು ಗೌರವಿಸಬೇಕು.
 • ಕುಟುಂಬ ವರದಿ ಪುಸ್ತಕ ಎನ್ನುವುದು ನಮ್ಮ ಧರ್ಮಕೇಂದ್ರಕ್ಕೆ ಸೇರಿದವರ ಗುರುತಿನ ಪತ್ರವಿದ್ದಂತೆ.
 • ಕುಟುಂಬದ ಪ್ರತಿ ವ್ಯಕ್ತಿಯೂ ಧರ್ಮಕೇಂದ್ರದ ಆಧ್ಯಾತ್ಮಿಕ ಮತ್ತು ಇತರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಇತರ ಕನಿಷ್ಠ ನಿಯಮಗಳನ್ನು ಪಾಲಿಸುವಂತವರಾಗಬೇಕು ಹಾಗೂ ಧರ್ಮಕೇಂದ್ರದ ವಿಷಯಗಳನ್ನು ಹಗುರವಾಗಿ ಪರಿಗಣಿಸಬಾರದು.
 • ಕುಟುಂಬ ಪುಸ್ತಕ ಹೊಂದಿರುವ ಮಾತ್ರಕ್ಕೆ ಆಧ್ಯಾತ್ಮಿಕ ಮತ್ತು ಇತರ ಸವಲತ್ತುಗಳು ತಮ್ಮ ಹಕ್ಕು ಎಂದು ಭಾವಿಸಬಾರದು.
 • ತಮ್ಮ ಅಗತ್ಯಗಳಿಗಾಗಿ ಧರ್ಮಕೇಂದ್ರದ ಗುರುಗಳನ್ನು ಕಾಣುವುದಿದ್ದಲ್ಲಿ ಪಾಲನಾ ಸಮಿತಿಯ ಸದಸ್ಯರೊಂದಿಗೆ ಗುರುಗಳನ್ನು ಕಾಣುವಂತೆ ಈ ಮೂಲಕ ತಿಳಿಸಲಾಗಿದೆ.
 • ಧರ್ಮಸಭೆಯ ಮತ್ತು ಧರ್ಮಕೇಂದ್ರದ ನೀತಿ-ಮಿಯಮಗಳನ್ನು ಪಾಲಿಸುತ್ತಾ ಪ್ರಭುಕ್ರಿಸ್ತರ ಶರೀರವಾಗಿರುವ ನಾವೆಲ್ಲರೂ ಅವರನ್ನು ಸೇರಲು ಶ್ರಮಿಸಬೇಕು.
 • ಭಾನುವಾರ ಮತ್ತು ಇತರ ಹಬ್ಬದ ದಿನಗಳಲ್ಲಿ ಕೆಳಗಿನ ಶಿಸ್ತುಗಳನ್ನು ಪಾಲಿಸುವಂತೆ ಕೇಳಿಕೊಳ್ಳಲಾಗಿದೆ:
 • ಬಲಿಪೂಜೆಗೆ ಮುಂಚೆಯೇ ಬಂದು ಪ್ರಾರ್ಥಿಸಿ ಸಿದ್ದರಾಗಿ.
 • ಮುಂದಿನ ಸಾಲಿನಿಂದ ಆಸನಗಳಲ್ಲಿ ಕುಳಿತುಕೊಳ್ಳಿ. ತಡವಾಗಿ ಬರುವವರು ಯಾರಿಗೂ ತೊಂದರೆಯಾಗದೆ ಹಿಂದಿನ ಆಸನಗಳನ್ನು ಪಡೆಯಲು ಸುಲಭವಾಗುತ್ತದೆ.
 • ಆಸನಗಳಲ್ಲಿ ಕುಳಿತುಕೊಳ್ಳಲು ಸಹೋ. ವಿಲಿಯಂ ಮತ್ತು ಸಹೋ. ಮೇರಿ ಅನಿತಾ ಸಹಾಯಮಾಡುತ್ತಾರೆ. ಅವರ ಮಾರ್ಗದರ್ಶನವನ್ನು ಅನುಸರಿಸಿ.
 • ಬಲಿಪೂಜೆಯಲ್ಲಿ ಪುಟ್ಟ ಮಕ್ಕಳು ಓಡಾಡಿಕೊಂಡು, ಆಡವಾಡಿ, ಕೂಗಾಡದಂತೆ ನೋಡಿಕೊಳ್ಳಿ, ಇದರಿಂದ, ಇತರರು ಶಾಂತವಾಗಿ ಬಲಿಪೂಜೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
 • ಬಲಿಪೂಜೆಗೆ ಬಂದಾಗ ನಿಮ್ಮ ಮೊಬೈಲ್‍ ಫೋನ್‍ಗಳನ್ನು ನಿಶ್ಯಬ್ದಮಾಡಿ ಅಥವಾ ಆಫ್‍ ಮಾಡಿ.
 • ಸಹೋ. ವಿಲಿಯಂ ಮತ್ತು ಸಹೋ. ಅಂತೋಣಿ ವಿನ್ಸೆಂಟ್‍ ಬಲಿಪೂಜೆಯ ನಂತರ ಕುಟುಂಬ ವರಿಯನ್ನು ಪಡೆದುಕೊಳ್ಳುತ್ತಾರೆ. ಅವರ ಬಳಿ ಹಣ ಸಂದಾಯ ಮಾಡಿ ರಸೀದಿ ಪಡೆದುಕೊಳ್ಳಬಹುದು.
 • ಕೋವಿಡ್‍ ಖಾಯಿಲೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರದೊಂದಿಗೆ ಕೈ ಜೋಡಿಸಲು ಈ ಬಾರಿ ಕ್ಯಾರೆಲ್ಸ್‍ ಹಾಡಲು ಮನೆಗಳಿಗೆ ಧರ್ಮಕೇಂದ್ರದ ಭಜನಾ ಗುಂಪು ಬರುವುದಿಲ್ಲ.
 • ನಮ್ಮ ಧರ್ಮಕೇಂದ್ರದಲ್ಲಿ ಯಾರಾದರೂ ಮರಣಹೊಂದಿದಲ್ಲಿ ಜನ ಗುಂಪು ಸೇರುವುದನ್ನು ನಿಯಂತ್ರಿಸಲು ಮತ್ತು ಒಬ್ಬರಿಗೊಬ್ಬರು ಸಮೀಪ ಬರುವುದನ್ನು ತಪ್ಪಿಸಲು ಬರುವ ಈಸ್ಟರ್‍ ಹಬ್ಬದವರೆಗೆ ಬಲಿಪೂಜೆ ಇರುವುದಿಲ್ಲ, ಬದಲಿಗೆ, ಸಮಾಧಿಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಗಳು ಮಾತ್ರ ಇರುತ್ತವೆ.