ಪ್ರಕಟಣೆಗಳು 13-12-2020

ಆಗಮನ ಕಾಲದ 3ನೇ ವಾರ

  • 14-12-2020, ಸೋಮವಾರ ಶಿಲುಬೆಯ ಸಂತ ಯೊವಾನ್ನರ ಸ್ಮರಣೆ

 

  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
  • ಬಲಿಪೂಜೆ ನಂತರ ಯುವಕಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.

 

  • ಬರುವ ಭಾನುವಾರ 20-12-2020ದಂದು ಬಲಿಪೂಜೆಯ ನಂತರ ಒಂದು ಘಂಟೆ ಸಮಯ ಪರಮಪ್ರಸಾದ ಆರಾಧನೆ ಇರುತ್ತದೆ, ಈ ಸಮಯದಲ್ಲಿ ಪಾಪವಿಖ್ಯಾಪನೆಯನ್ನು ಕೇಳಲು ಗುರುಗಳು ಲಭ್ಯವಿರುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ರಿಸ್‍ಮಸ್‍ ಹಬ್ಬಕ್ಕೆ ಆಂತರಿಕವಾಗಿ ಸಿದ್ದರಾಗುವಂತೆ ಕೇಳಿಕೊಳ್ಳುತ್ತೇನೆ.
  • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಸಂತ ಜಾನ್‍ ಬರ್ಕಮನ್ಸ್‍ ಪೀಠ ಸೇವಕರ ತಂಡವನ್ನು ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
  • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಮನುಕುಲ ಮಾತೆ ಯುವ ಬಳಗವನ್ನು ಆಹ್ವಾನಿಸುತ್ತೇನೆ.
  • ಧನ್ಯವಾದಗಳು
  • ಸಹಿ/-