ಪ್ರಕಟಣೆಗಳು 29-11-2020

ಆಗಮನ ಕಾಲದ 1ನೇ ವಾರ

  • 30-11-2020, ಸೋಮವಾರ ಪ್ರೇಷಿತ ಸಂತ ಆಂದ್ರೇಯರ ಹಬ್ಬ
  • 03-12-2020, ಗುರುವಾರ ಭಾರತದ ಪಾಲಕ ಸಂತ ಫ್ರಾನ್ಸಿಸ್‍ ಕ್ಸೇವಿಯರ್‍ರ ಹಬ್ಬ

 

  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.

 

  • ಇಂದು ಭಾನುವಾರ, 29-11-2020 ರಂದು ಸಂಜೆ 5 30ಕ್ಕೆ, ನಮ್ಮ ಧರ್ಮಕೇಂದ್ರದ ಪಾಲನಾ ಸಮಿತಿಯ ಸಭೆ ಇರುತ್ತದೆ. ಸದಸ್ಯರು ತಪ್ಪದೆ ಭಾಗವಹಿಸುವಂತೆ ಕೇಳಿಕೊಳ್ಳುತ್ತೇನೆ.
  • ಇಂದು ಭಾನುವಾರ, 29-11-2020 ಕಾರ್ಮೆಲ್‍ ಸಭೆಯ ಅಸೋಸಿಯೇಟ್ಸ್‍ ಸದಸ್ಯರು ಸುವಾರ್ತಾ ಪ್ರಚಾರ ಭಾನುವಾರದ ಆಚರಣೆಯನ್ನು ಆಯೋಜಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಮತ್ತು ಎಲ್ಲರೂ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
  • 04-12-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.
  • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಮನುಕುಲ ಮಾತೆ ವಲಯ (ಹಳೇ ಎಂ ಸಿ ರಸ್ತೆ & ಶಂಕರಪುರ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
  • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ನಿತ್ಯಾಧಾರ ಮಾತೆ ವಲಯ (ಹೊಳಲು)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.

ಧನ್ಯವಾದಗಳು

ಸಹಿ