ಪ್ರಕಟಣೆಗಳು 15-11-2020

ಸಾಧಾರಣ ಕಾಲದ 33ನೇ ಭಾನುವಾರ

 • 16-11-2020, ಸೋಮವಾರ ಸಂತ ಜೆಟ್ರೂಡ್‍ರ ಸ್ಮರಣೆ
 • 17-11-2020, ಮಂಗಳವಾರ ಹಂಗೇರಿಯ ಸಂತ ಎಲಿಜಬೇತ್‍ರ ಸ್ಮರಣೆ
 • 18-11-2020, ಬುಧವಾರ ಸಂತ ಪೇತ್ರ ಮತ್ತು ಪೌಲರ ಮಹಾಬೆಸಿಲಿಕದ ಅರ್ಪಣೆಯ ಸ್ಮರಣೆ
 • 21-11-2020, ಶನಿವಾರ ಮಾತೆ ಮರಿಯಳನ್ನು ಕಾಣಿಕೆಯಾಗಿ ಅರ್ಪಿತರಾದ ಸ್ಮರಣೆ

 

 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.

 

 • ಕುಟುಂಬ ಬೈಬಲ್‍ ಕ್ವಿಜ್‍ ಉತ್ತರ ಪತ್ರಿಕೆಯನ್ನು ಹಿಂತಿರುಗಿಸಲು15-11-2020 ಕೊನೆ ದಿನ.
 • ಇಂದು ನಮ್ಮ ಧರ್ಮಕೇಂದ್ರದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಕಳೆದ ಭಾನುವಾರದಂತೆ ಯುವಕ-ಯುವತಿಯರು ಮಕ್ಕಳಿಗೆ ಕೆಲ ಆಟಗಳನ್ನು ಆಡಿಸಲಿದ್ದಾರೆ ಮತ್ತು ಬಹುಮಾನಗಳನ್ನು ನೀಡಲಿದ್ದಾರೆ. ಎಲ್ಲಾ ಮಕ್ಕಳು ಭಾಗವಹಿಸುವಂತೆ ಕೇಳಿಕೊಳ್ಳುತ್ತೇನೆ.
 • ಇಂದು ಕಾರ್ಮೆಲ್‍ ಕಾನ್ವೆಂಟ್‍ನ ಸಿಸ್ಟರ್ಸ್‍ಗಳು ಸುವಾರ್ತಾ ಪ್ರಚಾರ ಭಾನುವಾರದ ಆಚರಣೆಯನ್ನು ಆಯೋಜಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಮತ್ತು ಎಲ್ಲರೂ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
 • ಬರುವ ಭಾನುವಾರ ಮರಿಯಮ್ಮನವರ ಸೈನ್ಯ ಮತ್ತು ವಿನ್ಸೆಂಟ್‍ ದೆ ಪೌಲ್‍ ಸಭೆಯ ಸದಸ್ಯರು ಸುವಾರ್ತಾ ಪ್ರಚಾರ ಭಾನುವಾರದ ಆಚರಣೆಯನ್ನು ಆಯೋಜಿಸುವರು. ಸರ್ವರೂ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
 • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಅಮಲೋದ್ಭವಿ ಮಾತೆ ವಲಯ (ವಿದ್ಯಾನಗರ & ಕ್ರಿಶ್ಚಿಯನ್‍ ಕಾಲೋನಿ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
 • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ವೆಳಾಂಗಣ್ಣಿ ಮಾತೆ ವಲಯ (ಕುರುಬರ ಹಾಸ್ಟೆಲ್‍ ಹಿಂಭಾಗ ಮತ್ತು ಸುಭಾಷ್‍ನಗರ)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.

ಧನ್ಯವಾದಗಳು

ಸಹಿ/-