ಸಾಧಾರಣ ಕಾಲದ 32ನೇ ಭಾನುವಾರ
- 09-11-2020, ಸೋಮವಾರ ಲ್ಯಾಟೆರನ್ ಬೆಸಿಲಿಕದ ಅರ್ಪಣೆಯ ಸ್ಮರಣೆ
- 10-11-2020, ಮಂಗಳವಾರ ಸಂತ ಶ್ರೇಷ್ಠ ಲಿಯೋರ ಸ್ಮರಣೆ
- 11-11-2020, ಬುಧವಾರ ಸಂತ ಟಾರ್ಸ್‍ನ ಮಾರ್ಟಿನ್‍ರ ಸ್ಮರಣೆ
- 12-11-2020, ಗುರುವಾರ ಸಂತ ಜೋಸೆಫಾತ್‍ರ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
- ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
- ಬಲಿಪೂಜೆ ನಂತರ ಯುವಕ–ಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
- ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
- ಬಲಿಪೂಜೆಯ ನಂತರ ವಿನ್ಸೆಂಟ್ ದಿಪೌಲ್ ಸಭೆ ನಡೆಯುವುದು. ದಯಮಾಡಿ ಸದಸ್ಯರು ತಪ್ಪದೆ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
- ಕುಟುಂಬ ಬೈಬಲ್ ಕ್ವಿಜ್‍ನ್ನು ನಮ್ಮ ಯುವಬಳಗ ಆಯೋಜಿಸಿದೆ. ಪೂರ್ತಿ ಉತ್ತರಿಸಿ ಮೊದಲು ನೀಡಿದ ಕುಟುಂಬಕ್ಕೆ ವಿಶೇಷ ಬಹುಮಾನ ಮತ್ತು ಪೂರ್ತಿ ಸರಿ ಉತ್ತರ ನೀಡಿದ ಮೂರು ಕುಟುಂಬಕ್ಕೆ ಬಹುಮಾನವನ್ನು ನೀಡಲಾಗುವುದು. ಉತ್ತರ ಪತ್ರಿಕೆಯನ್ನು 15-11-2020 (15 ದಿನಗಳ ಸಮಯ)ರೊಳಗೆ ಹಿಂತಿರುಗಿಸಬೇಕು.
- ಬರುವ ಭಾನುವಾರ, 15-11-2020ರಂದು ನಮ್ಮ ಧರ್ಮಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸೋಣ. ಇಂದು ಭಾನುವಾರ, 08-11-2020 ರಂದು ಮತ್ತು 15-11-2020ರಂದು ಕೆಲ ಆಟಗಳನ್ನು ಆಡಿಸಿ ಬಹುಮಾನ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ದಯಮಾಡಿ ಬರುವ ಎರಡು ಭಾನುವಾರಗಳಂದು ಮಕ್ಕಳನ್ನು ಬಲಿಪೂಜೆಗೆ ಕರೆತನ್ನಿ.
- ಬರುವ ಭಾನುವಾರ ಸುವಾರ್ತಾ ಪ್ರಚಾರ ಭಾನುವಾರದ ಅಂಗವಾಗಿ ಕಾರ್ಮೆಲ್ ಕಾನ್ವೆಂಟ್‍ನ ಸಿಸ್ಟರ್ಸ್‍ಗಳು ತಿನಿಸುಗಳನ್ನು ಮತ್ತು ಯುವಬಳಗ ಕೆಲ ಆಟಗಳನ್ನು ಆಯೋಜಿಸುವರು. ಎಲ್ಲರೂ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
- ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಫಾತಿಮ ಮಾತೆ ವಲಯ (ಗಾಂಧಿನಗರ ಬಿ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
- ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಅಮಲೋದ್ಭವಿ ಮಾತೆ ವಲಯ (ವಿದ್ಯಾನಗರ & ಕ್ರಿಶ್ಚಿಯನ್ ಕಾಲೋನಿ)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.
ಧನ್ಯವಾದಗಳು
ಸಹಿ/-