ಪ್ರಕಟಣೆಗಳು 01-11-2020

ಸಾಧಾರಣ ಕಾಲದ 31ನೇ ಭಾನುವಾರ

 • 02-11-2020, ಸೋಮವಾರ ಸಕಲ ಮೃತರ ಸ್ಮರಣೆ
 • 03-11-2020, ಮಂಗಳವಾರ ಸಂತ ಮಾರ್ಟಿನ್‍ ದೆ ಪೊರೆಸ್‍ರ ಸ್ಮರಣೆ
 • 04-11-2020, ಬುಧವಾರ ಸಂತ ಚಾರ್ಲ್ಸ್‍ ಬೊರೆಮಿಯೋರ ಸ್ಮರಣೆ

 

 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
 • ಬಲಿಪೂಜೆ ನಂತರ ಯುವಕಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
 • ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
 • ಬಲಿಪೂಜೆಯ ನಂತರ ವಿನ್ಸೆಂಟ್‍ ದಿಪೌಲ್‍ ಸಭೆ ನಡೆಯುವುದು. ದಯಮಾಡಿ ಸದಸ್ಯರು ತಪ್ಪದೆ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.

 

 • 02-11-2020, ಸೋಮವಾರ, ಬೆಳಿಗ್ಗೆ 7-00 ಗಂಟೆಗೆ ದೇವಾಲಯದಲ್ಲಿ ಬಲಿಪೂಜೆ ಅರ್ಪಿಸಿ, ನಂತರ ಸಮಾಧಿಗೆ ತೆರಳಿ, ಪ್ರಾರ್ಥಿಸಿ ನಿಮ್ಮ ಕುಟುಂಬಗಳಿಗೆ ಸೇರಿದ ಸಮಾಧಿಗಳಿದ್ದಲ್ಲಿ ಪವಿತ್ರೀಕರಿಸಲಾಗುವುದು, ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ.
 • ನವೆಂಬರ್‍ ತಿಂಗಳು ಸಕಲ ಮೃತರಿಗಾಗಿ ವಿಶೇಷವಾಗಿ ಪ್ರಾರ್ಥಿಸುವ ದಿನಗಳಾದುದರಿಂದ ಈ ದಿನಗಳಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ, ಪರಮಪ್ರಸಾದ ಸ್ವೀಕರಿಸಿ, ಸಮಾಧಿ ಸ್ಥಳಕ್ಕೆ ಭೇಟಿಮಾಡಿ ಸಕಲ ಮೃತರಿಗಾಗಿ ಪ್ರಾರ್ಥಿಸುವವರಿಗೆ ದೇವರ ವಿಶೇಷ ಕೃಪೆ (Indulgence) ದೊರಕುವುದು. ಇದು ಧರ್ಮಸಭೆಯ ಬೋಧನೆ.
 • ಇಂದು ಭಾನುವಾರ, 01-11-2020 ಕುಟುಂಬ ಬೈಬಲ್‍ ಕ್ವಿಜ್‍ನ್ನು ನಮ್ಮ ಯುವಬಳಗ ಆಯೋಜಿಸುತ್ತಿದೆ. ನಮ್ಮ ಧರ್ಮಕೇಂದ್ರದ ಪ್ರತಿ ಕುಟುಂಬಕ್ಕೆ ಒಂದೊಂದು ಬೈಬಲ್‍ ಕ್ವಿಜ್‍ನ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುವುದು. ಪೂರ್ತಿ ಉತ್ತರಿಸಿ ಮೊದಲು ನೀಡಿದ ಕುಟುಂಬಕ್ಕೆ ವಿಶೇಷ ಬಹುಮಾನ ಮತ್ತು ಪೂರ್ತಿ ಸರಿ ಉತ್ತರ ನೀಡಿದ ಮೂರು ಕುಟುಂಬಕ್ಕೆ ಬಹುಮಾನವನ್ನು ನೀಡಲಾಗುವುದು. ಹೊಸ ಒಡಂಬಡಿಕೆಯಿಂದ ಪ್ರಶ್ನೆಗಳನ್ನು ಆಯ್ದುಕೊಳ್ಳಲಾಗಿದೆ. ಬೈಬಲ್‍ ಓದಿ ಪ್ರಶ್ನೆಗಳಿಗೆ ಉತ್ತರಿಸಿ. ಉತ್ತರ ಪತ್ರಿಕೆಯನ್ನು 15-11-2020 (15 ದಿನಗಳ ಸಮಯ)ರೊಳಗೆ ಹಿಂತಿರುಗಿಸಬೇಕು.
 • ಬರುವ 15-11-2020ರಂದು ನಮ್ಮ ಧರ್ಮಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸೋಣ. ಬರುವ ಭಾನುವಾರ 08-11-2020 ರಂದು ಮತ್ತು 15-11-2020ರಂದು ಕೆಲ ಆಟಗಳನ್ನು ಆಡಿಸಿ ಬಹುಮಾನ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ದಯಮಾಡಿ ಬರುವ ಎರಡು ಭಾನುವಾರಗಳಂದು ಮಕ್ಕಳನ್ನು ಬಲಿಪೂಜೆಗೆ ಕರೆತನ್ನಿ.
 • ಬರುವ ಭಾನುವಾರಗಳಂದು ಸುವಾರ್ತಾ ಪ್ರಚಾರ ಭಾನುವಾರದ ಅಂಗವಾಗಿ ತಿನಿಸುಗಳನ್ನು ಮತ್ತು ಕೆಲ ಆಟಗಳನ್ನು ಆಯೋಜಿಸಲಾಗುವುದು. ದಯಮಾಡಿ ಎಲ್ಲರೂ ಕೈಜೋಡಿಸಿ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
 • 06-11-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.
 • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಲೂರ್ದು ಮಾತೆ ವಲಯ (ಗಾಂಧಿನಗರ ಎ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
 • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಫಾತಿಮ ಮಾತೆ ವಲಯ (ಗಾಂಧಿನಗರ ಬಿ)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.

ಧನ್ಯವಾದಗಳು

ಸಹಿ