ಪ್ರಕಟಣೆಗಳು 18-10-2020

ಸಾಧಾರಣ ಕಾಲದ 29ನೇ ಭಾನುವಾರ

 • 19-10-2020, ಸೋಮವಾರ, ಶಿಲುಬೆಯ ಸಂತ ಪೌಲರ ಸ್ಮರಣೆ
 • 22-10-2020, ಗುರುವಾರ ಸಂತ ಜಗದ್ಗುರು ದ್ವಿತೀಯ ಜಾನ್‍ಪಾಲರ ಸ್ಮರಣೆ
 • 24-10-2020, ಶನಿವಾರ, ಸಂತ ಆಂಟನಿ ಮೇರಿ ಕ್ಲಾರೆಟ್‍ರ ಸ್ಮರಣೆ
 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
 • 19-10-2020, ಸೋಮವಾರ ಬಲಿಪೂಜೆ ಸಂಜೆ 6 30ಕ್ಕೆ ಇರುವುದು.
 • ಬಲಿಪೂಜೆ ನಂತರ ಯುವಕಯುವತಿಯರಿಗೆ ಸಭೆ, ಮರಿಯಮ್ಮನವರ ಸೈನ್ಯದ ಸಭೆ, ವಿನ್ಸೆಂಟ್‍ ದಿಪೌಲ್‍ ಸಭೆ ಇರುವುದಿಲ್ಲ.
 • ಸಂತ ಜೋಸೆಫರ ದೇವಾಲಯದಲ್ಲಿ  ಸುವಾರ್ತಾ ಪ್ರಚಾರ ಸಲುವಾಗಿ ಇಂದು 18-10-2020, ಸೋಮವಾರ ಮಧ್ಯಾಹ್ನ 2-00 ರಿಂದ 6-00 ವರೆಗೆ ಧ್ಯಾನಕೂಟ ಮತ್ತು ಬಿನ್ನಹ ಪ್ರಾರ್ಥನೆ ಮತ್ತು ಬಲಿಪೂಜೆಯನ್ನು ಏರ್ಪಡಿಸಲಾಗಿದೆ. ಸರ್ವರನ್ನೂ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ.
 • ಇಂದು, ಶಾಲೆಯ ಆವರಣವನ್ನು ಪೋಲಿಸ್ಪರೀಕ್ಷೆಗಾಗಿ ವಶಪಡಿಸಿಕೊಳ್ಳುವುದರಿಂದ ಬಲಿಪೂಜೆ ಬೆಳಿಗ್ಗೆ 7-00 ಗಂಟೆಗೆ ಇದ್ದರೂ ಸಹಕರಿಸಿದ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ.
 • ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಜಪಮಾಲೆ ಮಾತೆ ವಲಯ (ಶಂಕರನಗರ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
 • ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಕಾರ್ಮೆಲ್‍ ಮಾತೆ ವಲಯ (ಹೌಸಿಂಗ್‍ ಬೋರ್ಡ್‍, ಹೊಸಳ್ಳಿ & ಸಂತೆಕಸಲಗೆರೆ)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.
 • ಧನ್ಯವಾದಗಳು
 • ಸಹಿ/-