Skip to content
ಸಾಧಾರಣ ಕಾಲದ 28ನೇ ಭಾನುವಾರ
- 15-10-2020, ಗುರುವಾರ, ಅವಿಲದ ಸಂತ ತೆರೆಸರ ಸ್ಮರಣೆ
- 16-10-2020, , ಶುಕ್ರವಾರ ಸಂತ ಮಾರ್ಗರೆಟ್ ಮೇರಿ ಆಲೋಕ್ವೆಯವರ ಸ್ಮರಣೆ
- 17-10-2020, ಶನಿವಾರ, ಅಂತಿಯೋಕ್ಯದ ಸಂತ ಇಗ್ನೇಷಿಯಸ್‍ರ ಸ್ಮರಣೆ
- 18-10-2020, ಭಾನುವಾರ, ವಿಶ್ವ ಸುವಾರ್ತಾ ಪ್ರಚಾರ ಭಾನುವಾರ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
- ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
- 12-10-2020, ಸೋಮವಾರ ಬಲಿಪೂಜೆ ಸಂಜೆ 6.30ಕ್ಕೆ ಇರುವುದು.
- ಬಲಿಪೂಜೆ ನಂತರ ಯುವಕ–ಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
- ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
- ಬಲಿಪೂಜೆಯ ನಂತರ ವಿನ್ಸೆಂಟ್ ದಿಪೌಲ್ ಸಭೆ ನಡೆಯುವುದು. ದಯಮಾಡಿ ಸದಸ್ಯರು ತಪ್ಪದೆ ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
- ಬರುವ ಭಾನುವಾರ, ಅಕ್ಟೋಬರ್ 18, ವಿಶ್ವ ಸುವಾರ್ತಾ ಪ್ರಚಾರ ಭಾನುವಾರ, ಅಂದಿನ ಕಾಣಿಕೆಯನ್ನು ಧರ್ಮಾಧ್ಯಕ್ಷರ ನಿವಾಸಕ್ಕೆ ಕಳುಹಿಸಿಕೊಡಲಾಗುವುದು.
- ಬರುವ ಭಾನುವಾರ, ಅಕ್ಟೋಬರ್ 18, ಶಾಲೆಯ ಆವರಣವನ್ನು ಪೋಲಿಸ್ ಪರೀಕ್ಷೆಗಾಗಿ ವಶಪಡಿಸಿಕೊಳ್ಳುವುದರಿಂದ ಬಲಿಪೂಜೆ ಬೆಳಿಗ್ಗೆ 7-00 ಗಂಟೆಗೆ ಇರುವುದು. ದಯಮಾಡಿ ಸಹಕರಿಸುವಂತೆ ಕೇಳಿಕೊಳ್ಳುತ್ತೇನೆ.
- ಈಗಾಗಲೇ ವರದಿ ತಲುಪಿಸಿದ್ದವರ ಕುಟುಂಬ ಪುಸ್ತಕಗಳು ಸಿದ್ಧಪಡಿಸಲಾಗುತ್ತಿದೆ, ಅದನ್ನು ನಿಮಗೆ ತಲುಪಿಸಲಾಗುವುದು. ಆನಂತರ, ಮಾಸಿಕ ವಂತಿಗೆಯನ್ನು ಸಲ್ಲಿಸಬಹುದಾಗಿದೆ.
- ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ದೇವಮಾತೆ ವಲಯ (ಕ್ಯಾತಂಗೆರೆ, PES ಬಡಾವಣೆ & ವಿನಾಯಕ ಬಡಾವಣೆ)ದ ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
- ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಜಪಮಾಲೆ ಮಾತೆ ವಲಯ (ಶಂಕರನಗರ)ದ ಎಲ್ಲಾ ಕುಟುಂಬಗಳನ್ನು ಆಹ್ವಾನಿಸುತ್ತೇನೆ.
- ಧನ್ಯವಾದಗಳು
- ಸಹಿ/-