ಸಾಧಾರಣ ಕಾಲದ 26ನೇ ಭಾನುವಾರ
- 29-09-2020, ಮಂಗಳವಾರ, ಪ್ರಧಾನ ದೂತರುಗಳ ಹಬ್ಬ
- 30-09-2020, ಬುಧವಾರ, ಸಂತ ಜೆರೋಮ್ ರ ಸ್ಮರಣೆ
- 01-10-2020, ಗುರುವಾರ, ಕಿರಿಯ ಪುಷ್ಪ ಸಂತ ತೆರೆಸ ರ ಸ್ಮರಣೆ
- 02-10-2020, ಶುಕ್ರವಾರ, ಸಂರಕ್ಷಕ ದೂತರ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
- ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾ ಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
- 28-09-2020, ಸೋಮವಾರ ಬಲಿಪೂಜೆ ಸಂಜೆ 6.30ಕ್ಕೆ ಇರುವುದು.
- ಬಲಿಪೂಜೆ ನಂತರ ಯುವಕ–ಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
- ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
- 02-10-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.
- ಬರುವ ಭಾನುವಾರದಿಂದ ವಲಯಗಳು ಮತ್ತು ಸಭೆಗಳು ಬಲಿಪೂಜಾ ಕ್ರಮವನ್ನು ನಡೆಸಿಕೊಟ್ಟು ಬಲಿಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹಾಯಮಾಡುವಂತೆ ಕೇಳಿಕೊಳ್ಳುತ್ತೇನೆ.
- ಇಂದು ತಮ್ಮ ಪಾಲಕರ ಹಬ್ಬವನ್ನು ಆಚರಿಸುತ್ತಿರುವ ಸಂತ ವಿನ್ಸೆಂಟ್ ದೆಪೌಲ್ ಸಭೆಯ ಸದಸ್ಯರೆಲ್ಲರಿಗೆ ಶುಭಾಷಯಗಳು.
- ಧನ್ಯವಾದಗಳು
- ಸಹಿ/-