ಪ್ರಕಟಣೆಗಳು 27-09-2020

ಸಾಧಾರಣ ಕಾಲದ 26ನೇ ಭಾನುವಾರ

 • 29-09-2020, ಮಂಗಳವಾರ, ಪ್ರಧಾನ ದೂತರುಗಳ ಹಬ್ಬ
 • 30-09-2020, ಬುಧವಾರ, ಸಂತ ಜೆರೋಮ್‍ ರ ಸ್ಮರಣೆ
 • 01-10-2020, ಗುರುವಾರ, ಕಿರಿಯ ಪುಷ್ಪ ಸಂತ ತೆರೆಸ ರ ಸ್ಮರಣೆ
 • 02-10-2020, ಶುಕ್ರವಾರ, ಸಂರಕ್ಷಕ ದೂತರ ಸ್ಮರಣೆ
 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾ ಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
 • 28-09-2020, ಸೋಮವಾರ ಬಲಿಪೂಜೆ ಸಂಜೆ 6.30ಕ್ಕೆ ಇರುವುದು.
 • ಬಲಿಪೂಜೆ ನಂತರ ಯುವಕಯುವತಿಯರಿಗೆ ಸಭೆ ಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
 • ಬಲಿಪೂಜೆಯ ನಂತರ ಮರಿಯಮ್ಮನವರ ಸೈನ್ಯದ ಸಭೆ ನಡೆಯುವುದು. ದಯಮಾಡಿ ಸದಸ್ಯರು ಭಾಗವಹಿಸಬೇಕೆಂದು ವಿನಂತಿಸುತ್ತೇನೆ.
 • 02-10-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.
 • ಬರುವ ಭಾನುವಾರದಿಂದ ವಲಯಗಳು ಮತ್ತು ಸಭೆಗಳು ಬಲಿಪೂಜಾ ಕ್ರಮವನ್ನು ನಡೆಸಿಕೊಟ್ಟು ಬಲಿಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಹಾಯಮಾಡುವಂತೆ ಕೇಳಿಕೊಳ್ಳುತ್ತೇನೆ.
 • ಇಂದು ತಮ್ಮ ಪಾಲಕರ ಹಬ್ಬವನ್ನು ಆಚರಿಸುತ್ತಿರುವ ಸಂತ ವಿನ್ಸೆಂಟ್‍ ದೆಪೌಲ್‍ ಸಭೆಯ ಸದಸ್ಯರೆಲ್ಲರಿಗೆ ಶುಭಾಷಯಗಳು. 
 • ಧನ್ಯವಾದಗಳು
 • ಸಹಿ/-