ಪ್ರಕಟಣೆಗಳು 23-08-2020

ಸಾಧಾರಣ ಕಾಲದ 21ನೇ ಭಾನುವಾರ

 • 24-08-2020, ಸೋಮವಾರ, ಪ್ರೇಷಿತ ಸಂತ ಬಾರ್ತಲೊಮೇಯರ ಹಬ್ಬ
 • 27-08-2020, ಗುರುವಾರ, ಸಂತ ಮೋನಿಕರ ಸ್ಮರಣೆ
 • 28-08-2020, ಶುಕ್ರವಾರ, ಸಂತ ಅಗಸ್ಟೀನರ ಸ್ಮರಣೆ
 • 29-08-2020, ಶನಿವಾರ, ಸಂತ ಸ್ನಾನಿಕ ಯೊವಾನ್ನರ ಶಿರಚ್ಛೇದನ ಸ್ಮರಣೆ
 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
 • 24-08-2020, ಸೋಮವಾರ ಬಲಿಪೂಜೆ ಸಂಜೆ 6 30ಕ್ಕೆ ಇರುವುದು.
 • ನಮ್ಮ ಧರ್ಮಕೇಂದ್ರದ ಪಾಲಕಿ ಕನ್ಯಾಮರಿಯಮ್ಮನವರ ಜನನೋತ್ಸವಕ್ಕೆ ನವೇನ ಪ್ರಾರ್ಥನೆ ಮತ್ತು ಬಲಿಪೂಜೆ ಬರುವ 30-08-2020, ಭಾನುವಾರ ಪ್ರಾರಂಭವಾಗಲಿದೆ. 30-08-2020 ರಂದು ಬೆಳಿಗ್ಗೆ 8.15 ಕ್ಕೆ ಧ್ವಜಾರೋಹಣ ನಂತರ ಬಲಿಪೂಜೆ ಇರುವುದು. ವಾರದ ದಿನಗಳಲ್ಲಿ ಸಂಜೆ 6-00 ಕ್ಕೆ ಬಲಿಪೂಜೆ ಮತ್ತು ನವೇನ ಪ್ರಾರ್ಥನೆಗಳು ಇರುತ್ತವೆ. 08-09-2020, ಮಂಗಳವಾರ ಬೆಳಿಗ್ಗೆ 7-00 ಕ್ಕೆ ಹಬ್ಬದ ಬಲಿಪೂಜೆ ಇರುತ್ತದೆ.
 • ಧನ್ಯವಾದಗಳು
 • ಸಹಿ/-