ಸಂತ ಜೋಸೆಫರ ನವೇನ ಪ್ರಾರ್ಥನೆ

ಸಂತ ಜೋಸೆಫರಲ್ಲಿ ವಿಶ್ವಾಸ ನಿವೇದನೆ

ಓ ಸಂತ ಜೋಸೆಫರೇ, ಯೇಸು ಕ್ರಿಸ್ತರ ವಿಶ್ವಾಸಕ್ಕೆ ಪಾತ್ರರೇ, ನಿಮ್ಮೆಡೆ ನಮ್ಮ ಹೃದಯವನ್ನು ಎತ್ತಿದ್ದೇವೆ, ನಿಮ್ಮ ಮಧ್ಯಸ್ಥಿಕೆಯನ್ನೂ, ಒತ್ತಾಸೆಯನ್ನೂ ಬಯಸುತ್ತೇವೆ, ನಿಮ್ಮ ಪ್ರಬಲ ಬಿನ್ನಹದಿಂದ ವಿನಮ್ರ ಹೃದಯದ ಯೇಸು ಪ್ರಭು ನಮ್ಮ ಆಧ್ಯಾತ್ಮಿಕ ಜೀವನಕ್ಕೆ ಬೇಕಾದ ಎಲ್ಲಾ ವರಗಳನ್ನೂ ದಯಪಾಲಿಸುತ್ತಾರೆ, ಮಾತ್ರವಲ್ಲ ಈ ಭೂಲೋಕ ಬಾಳಿನಲ್ಲೂ ಬೇಕಾದ ಎಲ್ಲಾ ಅವಶ್ಯಕ ವರಗಳನ್ನೂ ಮತ್ತು ಕಡೆಯಲ್ಲಿ ಸುಖವಾದ ಮರಣವನ್ನೂ ಪಡೆಯುವಂತೆ ಪ್ರಾರ್ಥಿಸುತ್ತಾರೆ.

ಮನುಷ್ಯರಾದ ದಿವ್ಯ ವಾರ್ತೆಯ ಕಾವಲರೇ, ನಮ್ಮ ಪರವಾಗಿ ನೀವು ಮಾಡುವ ಬಿನ್ನಹಗಳು ದೇವರ ಸನ್ನಿಧಿಗೆ ಏರುತ್ತದೆ ಎಂದು ನಂಬುತ್ತೇವೆ.

ಮಹಾಪುರುಷ ಸಂತ ಜೋಸೆಫರೇ, ಪ್ರಭು ಕ್ರಿಸ್ತರ ಮೇಲೆ ನಿಮಗಿರುವ ಪ್ರೀತಿ ಮತ್ತು ಕ್ರಿಸ್ತರ ನಾಮ ಮಹಿಮೆಗಾಗಿ, ನಮ್ಮ ಮನವಿಯನ್ನು ಆಲಿಸಿ, ಪಡೆದುಕೊಡಿರಿ (ಏಳು ಬಾರಿ ಪುನರಾವರ್ತಿಸುವುದು)

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಮೊದಲನೆ ದಿನ

ಓ ಸಂತ ಜೋಸೆಫರೇ, ನಾವು ಇಂದು ಕೈಗೊಳ್ಳುತ್ತಿರುವ ಈ ನವೇನ ಪ್ರಾರ್ಥನೆಯನ್ನು ಹರಸುವಂತೆ ಬೇಡಿಕೊಳ್ಳುತ್ತೇವೆ. “ಸಂತ ಜೋಸೆಫರಲ್ಲಿ ಮಾಡುವ ಕೋರಿಕೆಗಳು ವ್ಯರ್ಥವಾಗವು” ಎನ್ನುತ್ತಾರೆ ಕಿರಿಯ ಪುಷ್ಪ ಸಂತ ತೆರೆಸಾ. ಇದೇ ನಂಬಿಕೆಯಿಂದ ಪವಿತ್ರ ಹೃದಯದ ಯೇಸುವಿನ ಪರಿಶುದ್ದ ಮಾತೆಯಾದ ಮರಿಯಳನ್ನು ಆಲಿಸಿದಂತೆ ನಮ್ಮ ಪ್ರಾರ್ಥನೆಯನ್ನೂ ಆಲಿಸಿ ಪಡೆದುಕೊಡುವಂತೆ ನಿಮ್ಮಲ್ಲಿ ಬೇಡಿಕೊಳ್ಳುತ್ತೇವೆ. ಆಮೆನ್. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಎರಡನೆ ದಿನ

ಓ ಆಶೀರ್ವದಿತ ಸಂತ ಜೋಸೆಫರೇ, ನೀವು ದೇವಪುತ್ರನ ಪಾಲಕರಾಗಿ ಅವರನ್ನು ಪ್ರೇಮದಿಂದ ಸಲಹಿದಿರಿ. ನಿಮ್ಮನ್ನು ಬೇಡುತ್ತಿರುವ ನಿಮ್ಮ ಈ ಮಕ್ಕಳನ್ನು ನೋಡಿ, ನಮ್ಮ ಕಷ್ಟವನ್ನು ಕಟಾಕ್ಷಿಸಿ, ನಮ್ಮ ಕಣ್ಣೀರನ್ನು ಒರೆಸಿರಿ; ಪ್ರಭುವಿನ ಸನ್ನಿಧಿಯಲ್ಲಿ ನಮಗಾಗಿ ಪ್ರಾರ್ಥಿಸಿ ನಮ್ಮ ಈ ಕೋರಿಕೆಯನ್ನು ಈಡೇರಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಮೂರನೇ ದಿನ

ಓ ಸಂತ ಜೋಸೆಫರೇ, ನಮ್ಮ ತಣ್ಣಗಾದ ಹೃದಯವನ್ನು ದೇವಪ್ರೀತಿಯಿಂದ ಹೊತ್ತಿಸಿರಿ. ಭೂಲೋಕದ ಆಸೆಗಳಿಗೆ ಮಾರುಹೋಗದೇ ಶಾಶ್ವತವಾದ ನಿತ್ಯ ಜೀವನಕ್ಕೂ ದೇವ ಸನ್ನಿಧಿಯ ಭಾಗ್ಯಕ್ಕೂ ಸದಾ ಆಶಿಸುವಂತೆ ಮಾಡಿರಿ. ಯೇಸು ಕ್ರಿಸ್ತರಿಗೆ ಇಷ್ಟವಾಗುವುದನ್ನೇ ನಾವು ಸದಾ ಆಲೋಚಿಸಿ ಮಾಡುವಂತೆ ನಮ್ಮನ್ನು ಪ್ರೇರೇಪಿಸಿರಿ. ನಮ್ಮ ಈ ಕೋರಿಕೆಯು ದೈವಚಿತ್ತವಾಗಿದ್ದಲ್ಲಿ ಅದನ್ನು ನಾವು ಪಡೆಯುವಂತೆ ಬಿನ್ನಯಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ನಾಲ್ಕನೇ ದಿನ

ಓ ಸಂತ ಜೋಸೆಫರೇ, ಮನುಜರ ಜೀವೋದ್ದಾರದ ಉದಯ ಕಾಲದ ನಕ್ಷತ್ರವು ನೀವು. ನಿಮ್ಮ ವಿಧೇಯತೆಯಿಂದಾಗಿ ನಿತ್ಯ ಜೀವ ನೀಡುವ ದೇವಪುತ್ರ ಮನುಷ್ಯರಾಗಿ ಭುವಿಗೆ ಬಂದರು. ಹೀಗೆ, ಮಾನವರ ರಕ್ಷಣಾ ಯೋಜನೆಯಲ್ಲಿ ನೀವು ಪ್ರಮುಖ ಪಾತ್ರವಹಿಸಿದ್ದೀರಿ. ನಿಮ್ಮ ಈ ವಿಧೇಯತೆಯನ್ನು ಸ್ಮರಿಸಿ ತಂದೆಯಾದ ದೇವರು ನಮ್ಮ ಈ ಕೋರಿಕೆಯನ್ನು ಈಡೇರಿಸಲಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಐದನೇ ದಿನ

ಓ ಸಂತ ಜೋಸೆಫರೇ, ನಿಮ್ಮ ಜೀವನ ನಮಗೆ ಮಾದರಿಯಾಗಿದೆ. ನಿಮ್ಮಂತೆಯೇ ನಾವು ಜೀವಿಸಲು ಶ್ರಮಿಸುತ್ತಿದ್ದೇವೆ, ಇದಕ್ಕೆ ನಿಮ್ಮ ಸಹಾಯವನ್ನೂ, ಒತ್ತಾಸೆಯನ್ನೂ ಬೇಡುತ್ತೇವೆ. ನಿಮ್ಮ ವಿಧೇಯ ಗುಣವನ್ನು ನಮಗೆ ಕಲಿಸಿರಿ, ನಿಮ್ಮ ದೃಢವಿಶ್ವಾಸವನ್ನು ನಮಗೆ ಕಲಿಸಿರಿ, ನಿಮ್ಮ ಧೈರ್ಯವನ್ನು ನಮಗೆ ಕಲಿಸಿರಿ. ಅತಿ ಮುಖ್ಯವಾಗಿ, ದೇವರನ್ನು ಮಾತ್ರ ಮೆಚ್ಚಿಸಲು ನೀವು ಬಾಳಿದ ಮಾರ್ಗವನ್ನು ನಮಗೆ ಕಲಿಸಿರಿ. ನಮ್ಮ ಈ ಕೋರಿಕೆಗಾಗಿ ಬಿನ್ನಯಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಆರನೇ ದಿನ

ಓ ಸಂತ ಜೋಸೆಫರೇ, ಪವಿತ್ರ ಕುಟುಂಬದ ಯಜಮಾನಿಕೆಯನ್ನು ಹೊತ್ತು ಮರಿಯಳನ್ನೂ, ಬಾಲಯೇಸುವನ್ನೂ ಕಾದು ಕಾಪಾಡಿದಿರಿ. ಕನಸಿನಲ್ಲಿ ದೇವದೂತನು ನೀಡುತ್ತಿದ್ದ ಸಂದೇಶಗಳನ್ನು ವಿಶ್ವಾಸಿಸಿ ಸಂಶಯಿಸದೇ ಅದೇ ರೀತಿಯಲ್ಲಿ ನಡೆದುಕೊಂಡಿರಿ. ನಮಗೂ ದೇವರ ಪ್ರೇರಣೆಯಲ್ಲಿ ನಂಬಿಕೆಯನ್ನು, ಅದನ್ನು ನಡೆಸುವ ವಿಶ್ವಾಸವನ್ನು ಪಡೆಯುವಂತೆ ಪ್ರಭುವಿನಲ್ಲಿ ಪ್ರಾರ್ಥಿಸಿರಿ, ಅದರೊಂದಿಗೆ ದೇವರ ಚಿತ್ತವಾದಲ್ಲಿ ನನ್ನ ಈ ಕೋರಿಕೆಯನ್ನೂ ನೆರವೇರಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಏಳನೇ ದಿನ

ಓ ಸಂತ ಜೋಸೆಫರೇ, ನೀವು ಯೇಸು ಬಾಲರನ್ನು ಕಾದ  ಹಾಗೆಯೇ ನಮ್ಮನ್ನು ಸದಾ ಪರಾಬಂರಿಸಿ ನಿಮ್ಮ ಗಮನದಲ್ಲಿಯೇ ಇಟ್ಟು ರಕ್ಷಿಸಿರಿ. ನಿಮ್ಮ ಪುತ್ರನಿಗೆ ಮೆಚ್ಚುಗೆಯಾದುದನ್ನೇ ಮಾಡಲು ಎಲ್ಲಾ ಪಾಪ ಪ್ರಚೋದನೆಯ ಸಮಯದಲ್ಲಿ ನಮಗಾಗಿ ಪ್ರಾರ್ಥಿಸಿರಿ ಮತ್ತು ನನ್ನ ಈ ಕೋರಿಕೆಗಾಗಿ ಬಿನ್ನಯಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಎಂಟನೆಯ ದಿನ

ಓ ಸಂತ ಜೋಸೆಫರೇ, ತಾವು ನೋಡುವುದನ್ನು ನೋಡುವುದಕ್ಕೂ, ಕೇಳುವುದನ್ನು ಕೇಳುವುದಕ್ಕೂ ಅನೇಕ ಪ್ರವಾದಿಗಳು ಅರಸರು ಆಶಿಸಿದ್ದರು, ಆದರೆ, ನೀವು ದೇವವಾಕ್ಯವಾದ ಪ್ರಭುವನ್ನು ಕೈಗಳಲ್ಲೆತ್ತಿ ಆಡಿಸಿದಿರಿ, ಅಲ್ಲದೇ, ಆ ಮನುಷ್ಯರಾದ ದೇವವಾಕ್ಯವನ್ನು ಪರಿಪಾಲಿಸಿದಿರಿ. ನಿಮ್ಮಂತೆ ದೇವವಾಕ್ಯವನ್ನು ಪ್ರೀತಿಸಿ, ಮುದ್ದಿಸುವ ಭಾಗ್ಯಕ್ಕಾಗಿ ನಾವು ಹಂಬಲಿಸುತ್ತೇವೆ. ನನ್ನ ಕೋರಿಕೆಯನ್ನು ನಿಮ್ಮ ಪುತ್ರನಲ್ಲಿ ಬಿನ್ನಯಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.

ಒಂಭತ್ತನೆಯ ದಿನ

ಓ ಸಂತ ಜೋಸೆಫರೇ, ನೀವು ಬಡತನದಲ್ಲಿದ್ದರೂ ಸದಾ ಆತ್ಮವಿಶ್ವಾಸದಿಂದಲೂ, ದೇವರಲ್ಲಿ ದೃಢನಂಬಿಕೆಯಿಂದಲೂ ಜೀವಿಸಿದಿರಿ. ಎಂತಹ ಸಮಯದಲ್ಲೂ ಎದೆಗುಂದದೆ ತಾಯಿ ಮರಿಯಳನ್ನೂ ಯೇಸುವನ್ನು ಪಾಲಿಸಿದಿರಿ. ನಿಮ್ಮಂತೆಯೇ ನಾವು ದೃಢ ವಿಶ್ವಾಸವುಳ್ಳವರಾಗಿಯೂ, ಆತ್ಮವಿಶ್ವಾಸ ಹೊಂದಿದವರಾಗಿಯೂ ನಿಮ್ಮ ಪ್ರಿಯ ಪುತ್ರನನ್ನು ಪೂರ್ಣ ಹೃದಯದಿಂದ ಪ್ರೀತಿಸುವಂತೆ ಕಲಿಸಿರಿ ಮತ್ತು ಈ ಕೋರಿಕೆಗಾಗಿ ಬಿನ್ನಯಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಸ್ವರ್ಗದಲ್ಲಿರುವ ನಮ್ಮ ತಂದೆಯೇ…

ನಮೋ ಮರಿಯಾ…

ಪಿತನಿಗೂ, ಸುತನಿಗೂ…

ಸಂತ ಜೋಸೆಫರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಮಹಾಮಹಿಮರೂ ಕನ್ಯಾಮರಿಯಳ ಪತಿಯೂ ಆದ ಸಂತ ಜೋಸೆಫರೇ, ನಾವು ಪರಿಶುದ್ಧ, ವಿನಮ್ರ, ಪ್ರೀತಿಯ ಮತ್ತು ದೇವರ ಚಿತ್ತಕ್ಕೆ ಸದಾ ಮಣಿಯುವ ಹೃದಯವನ್ನು ಹೊಂದುವಂತೆ ಪ್ರಾರ್ಥಿಸಿರಿ. ನಮ್ಮ ಜೀವನದಲ್ಲಿ ನೀವು ಮಾರ್ಗದರ್ಶಕರಾಗಿಯೂ, ತಂದೆಯಾಗಿಯೂ ಮತ್ತು ಮಾದರಿಯಾಗಿಯೂ ಇರುವಂತೆ ನಿಮ್ಮನ್ನು ಬೇಡಿಕೊಳ್ಳುತ್ತೇವೆ, ಆಗ, ನಿಮ್ಮಂತೆಯೇ ಯೇಸು ಮತ್ತು ಮರಿಯಳ ಸನ್ನಿಧಿಯಲ್ಲಿ ಜೀವಿಸುವ ಮತ್ತು ಮರಣಿಸುವ ಕೃಪೆ ನಮಗೂ ದೊರಕುವುದು, ಆಮೆನ್.