ಸಂತ ಅಂತೋಣಿಯವರ ನವೇನ ಪ್ರಾರ್ಥನೆ

ಸಾಮಾನ್ಯ ಪ್ರಾರ್ಥನೆ: ಓ ಅದ್ಭುತಶಾಲಿಯಾದ ಸಂತ ಅಂತೋಣಿಯವರೇ, ನಿಮ್ಮ ತೋಳುಗಳಲ್ಲಿರುವ ಬಾಲಯೇಸುವಿನ ಮತ್ತು ಪವಾಡಗಳನ್ನೆಸಗುವ ನಿಮ್ಮ ಶಕ್ತಿಯಿಂದಾಗಿ ನೀವು ಪ್ರಖ್ಯಾತರಾಗಿದ್ದೀರಿ, ನನ್ನ ಅಂತರಾಳದಿಂದ ಬೇಡುತ್ತಿರುವ ಈ ನನ್ನ ಕೋರಿಕೆಯನ್ನು ಪರಾಂಭರಿಸಿ ಈಡೇರಿಸುವಂತೆ ಅಂಗಲಾಚಿ ಬೇಡಿಕೊಳ್ಳುತ್ತೇನೆ. (ಕೋರಿಕೆಯನ್ನು ನಿವೇದಿಸುವುದು)

ನಿರ್ಭಾಗ್ಯ ಪಾಪಿಗಳ ಮೇಲೆ ಕರುಣೆವುಳ್ಳವರಾಗಿದ್ದ ನೀವು, ನಿಮ್ಮನ್ನು ಪ್ರಾರ್ಥಿಸುತ್ತಿರುವ ಈ ಅಪಾತ್ರರನ್ನು ಆಲಿಸಿರಿ, ದೈನ್ಯದಿಂದ ಬೇಡುತ್ತಿರುವ ಈ ಕೋರಿಕೆಯನ್ನು ಈಡೇರಿಸಿ ದೇವರ ಮಹಿಮೆಯನ್ನು ಬೆಳಗಿರಿ. (ಕೋರಿಕೆಯನ್ನು ಮತ್ತೊಮ್ಮೆ ನಿವೇದಿಸುವುದು)

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಸಂತ ಅಂತೋಣಿಯವರ ನವೇನ ಪ್ರಾರ್ಥನೆ (ನವದಿನಗಳ ಎಡೆಬಿಡದ ಪ್ರಾರ್ಥನೆ)

ದಿನ ಒಂದು

ಓ ಪರಿಶುದ್ಧ ಸಂತ ಅಂತೋಣಿಯವರೇ, ಸೃಷ್ಟಿಯ ಎಲ್ಲವನ್ನೂ-ಎಲ್ಲರನ್ನೂ ನೀವು ಬಹಳವಾಗಿ ಪ್ರೀತಿಸುತ್ತೀರಿ. ಆದುದರಿಂದಲೇ, ನೀವು ಕಷ್ಟಪಡುವ, ನೋವಿನಲ್ಲಿ ಸೋತಿಹ ಮತ್ತು ನಿಮ್ಮಲ್ಲಿ ಬೇಡುವ ಎಲ್ಲರಿಗಾಗಿ ದೇವರಿಂದ ಪವಾಡಗಳನ್ನೆಸಗಿ ವರಪ್ರಸಾದಗಳನ್ನು ಪಡೆದುಕೊಡುತ್ತೀರಿ. ಈ ವಿಶ್ವಾಸದಿಂದಲೇ ನಾನು ನಿಮ್ಮ ಬಳಿ ಸಹಾಯಕ್ಕಾಗಿ ಅಂಗಲಾಚಿ ಬಂದಿದ್ದೇನೆ, ನನ್ನ ಈ ಕೋರಿಕೆಗಾಗಿ ಬಿನ್ನಯಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ನನ್ನ ಕೋರಿಕೆ ಪವಾಡ ಬಯಸಿದರು ಸರಿ ಅದನ್ನು ಪಡೆದುಕೊಡುವಂತೆ ನಿಮ್ಮಲ್ಲಿ ವಿನಂತಿಸುತ್ತೇನೆ. ಸೋತು-ಬಳಲಿ ನಿಮ್ಮಲ್ಲಿ ಪ್ರಾರ್ಥಿಸುವವರನ್ನು ಆದರಿಸುವ ನೀವು, ನಿಮ್ಮ ತೋಳುಗಳಲ್ಲಿ ನಲಿಯುತ್ತಿರುವ ಬಾಲಯೇಸುವಿನ ಕಿವಿಗಳಲ್ಲಿ ನನ್ನ ಕೋರಿಕೆಯನ್ನು ನಿವೇದಿಸಿ ಇದನ್ನು ಪಡೆದುಕೊಡುವಂತೆ ನಿಮ್ಮಲ್ಲಿ ಕೋರುತ್ತೇನೆ.

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಎರಡು

ಪವಾಡ ಪುರುಷ ಸಂತ ಅಂತೋಣಿಯವರೇ, ನಿಮ್ಮನ್ನು ಆಶ್ರಯಿಸಿ, ನಿಮ್ಮಲ್ಲಿ ಪ್ರಾರ್ಥಿಸಿದವರು ಎಂದಿಗೂ ಕೈ ಬಿಡಲ್ಪಟ್ಟಿಲ್ಲ ಎಂಬುದನ್ನು ನಾನು ಬಲ್ಲೆ. ಇಂತಹ ವಿಶ್ವಾಸದೊಂದಿಗೆ ನಿಮ್ಮಲ್ಲಿ ಬಂದು, ನಿಮ್ಮ ಸಹಾಯವನ್ನು ಬೇಡುತ್ತಿರುವ ನನ್ನ ಕೋರಿಕೆಯನ್ನು ನೀವು ಪಡೆದುಕೊಡುವಿರಿ ಎಂದು ದೃಢವಾಗಿ ನಂಬುತ್ತೇನೆ. ದೇವ ಪ್ರೀತಿಯ ಪ್ರಚಾರಕರೇ, ದೇವರ ಸನ್ನಿಧಾನದಲ್ಲಿ ನನ್ನ ಕೋರಿಕೆಯನ್ನು ಮಂಡಿಸಿ ನನಗಾಗಿ ಬಿನ್ನಯಿಸಿ ಈ ಕೋರಿಕೆಯನ್ನು ಪಡೆದುಕೊಡಿರಿ. (ಕೋರಿಕೆಯನ್ನು ನಿವೇದಿಸುವುದು)

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಮೂರು

ಓ ಪೂಜ್ಯ ಸಂತ ಅಂತೋಣಿಯವರೇ, ನೀವು ಅತ್ಯಂತ ಸದ್ಗುಣಿ, ಆದುದರಿಂದಲೇ, ಬಾಲಯೇಸುವೇ ನಿಮಗೆ ದೊರಕಿದರು, ನಿಮ್ಮ ತೋಳುಗಳಲ್ಲಿ ಆಡಿದರು ಮತ್ತು ಅವರನ್ನು ಅಪ್ಪಿಕೊಳ್ಳುವ ಭಾಗ್ಯ ದೊರಕಿತು. ನನ್ನ ಮೇಲೆ ಕಟಾಕ್ಷಿಸಿರಿ. ಮಾತೆಯ ಸಂರಕ್ಷಣೆಯಲ್ಲಿ ಜನಿಸಿ, ನಿಮ್ಮನ್ನೇ ಆಕೆಗೆ ಅರ್ಪಿಸಿಕೊಂಡಿರಿ, ಹೀಗೆ, ನೀವು ಶಕ್ತಿಯುತ ಮಧ್ಯಸ್ಥಿಕರಾದಿರಿ. ಸ್ವರ್ಗದಲ್ಲಿ ನನ್ನ ಈ ಕೋರಿಕೆಯನ್ನು ನಿವೇದಿಸಿ, ಅದನ್ನು ಪಡೆದುಕೊಡಿರಿ. (ಕೋರಿಕೆಯನ್ನು ನಿವೇದಿಸುವುದು)

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ನಾಲ್ಕು

ಓ ಮಹಾಶಕ್ತರಾದ ಸಂತ ಅಂತೋಣಿಯವರೇ ನಿಮ್ಮನ್ನು ವಂದಿಸಿ, ಸನ್ಮಾನಿಸುತ್ತೇನೆ. ಸರ್ವ ಮನುಷ್ಯ ಕುಲಕ್ಕಾಗಿ ನೀವು ಪ್ರಾರ್ಥಿಸುತ್ತೀರಿ. ಎಲ್ಲರ ಮನಪರಿವರ್ತನೆಗಾಗಿ, ಅವರ ಕಷ್ಟದಲ್ಲಿ ನೆರವಾಗಿ, ನೋವಿಗೆ ಸ್ಪಂದಿಸುತ್ತೀರಿ. ಮನುಷ್ಯ ಕುಲ ಕಳೆದುಕೊಂಡಿಹ ದೇವರ ಪ್ರೀತಿಯ ಜ್ಞಾನ ಮತ್ತೆ ದೊರಕುವಂತೆ ಅವರಿಗಾಗಿ ಪ್ರಾರ್ಥಿಸುತ್ತೀರಿ. ಇದರೊಂದಿಗೆ ನನ್ನ ಈ ಕೋರಿಕೆಗಾಗಿಯೂ ಬಿನ್ನಯಿಸಿ ಪಡೆದುಕೊಡಿರಿ. (ಕೋರಿಕೆಯನ್ನು ನಿವೇದಿಸುವುದು) ಅದನ್ನು ಪಡೆದ ನಂತರ ದೇವರಿಗೆ ಕೃತಜ್ಞನಾಗಿ ಬಾಳುವುದನ್ನು ಕಲಿಸಿರಿ.

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಐದು

ಓ ಪರಿಶುದ್ಧ ಲಿಲ್ಲಿ ಪುಷ್ಪವೇ, ಕ್ರೈಸ್ತರ ಮಹಿಮಾ ಆಭರಣವೇ, ನೀವು ಜ್ಞಾನಿಗಳು ಹಾಗೂ ದೈವ ಪ್ರೀತಿಯ ಸಂದೇಶಕಾರರು. ದೇವರು ನಿಮಗೆ ನೀಡಿರುವ ಸೌಭಾಗ್ಯಕ್ಕಾಗಿಯೂ, ನಿಮ್ಮ ಮೂಲಕ ಅವರು ಎಸಗುವ ಎಲ್ಲಾ ಅತಿಶಯಕ್ಕಾಗಿಯೂ ದೇವರಿಗೆ ನಾನು ಕೃತಜ್ಞನಾಗಿದ್ದೇನೆ. ನೀವು ನನಗೆ ನೆರವಾಗುವಂತೆ ಮತ್ತು ನನ್ನ ಈ ಕೋರಿಕೆಯನ್ನು ಪಡೆದುಕೊಡುವಂತೆ ನಿಮ್ಮನ್ನು ದೈನ್ಯದಿಂದ ಕೇಳಿಕೊಳ್ಳುತ್ತೇನೆ. (ಕೋರಿಕೆಯನ್ನು ನಿವೇದಿಸುವುದು)

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಆರು

ಓ ಸಂತ ಅಂತೋಣಿಯವರೇ, ದೇವರು ತಮ್ಮ ಶುಭಸಂದೇಶವನ್ನು ಸಾರುವುದಕ್ಕಾಗಿ ನಿಮ್ಮನ್ನು ನೇಮಿಸಿದರು, ಇದಕ್ಕಾಗಿ ವಿವಿಧ ಭಾಷೆಗಳಲ್ಲಿ ಮಾತನಾಡುವ ಪಾಂಡಿತ್ಯವನ್ನೂ, ಅದ್ಬುತಗಳನ್ನು ಮಾಡುವ ಶಕ್ತಿಯನ್ನೂ ದೇವರು ನಿಮಗೆ ನೀಡಿದ್ದಾರೆ. ನನ್ನ ಕೋರಿಕೆಯನ್ನು ದೇವರ ಸನ್ನಿಧಾನದಲ್ಲಿ ನೆನೆದು ಬಿನ್ನಯಿಸಿ ಪ್ರಾರ್ಥಿಸಿರಿ ಮತ್ತು ಅದಕ್ಕೆ ಪೂರಕವಾಗಿ ದಿನಂಪ್ರತಿ ನಾನು ದೇವರ ಆಜ್ಞೆಗಳಂತೆ ನಡೆಯಲು ಮತ್ತು ದೇವರನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಸಿರಿ, (ಕೋರಿಕೆಯನ್ನು ನಿವೇದಿಸುವುದು)  

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಏಳು

ಓ ಸಂತ ಅಂತೋಣಿಯವರೇ,ಪರಮನ ಭಕ್ತಿಯಲ್ಲಿ ನೀವು ಶ್ರೇಷ್ಠರು, ನಿಮ್ಮ ಭಕ್ತಿಯನ್ನು ನನಗೂ ಕಲಿಸಿರಿ. ದೈವಚಿತ್ತಕ್ಕೆ ನೀವು ಸದಾ ತಲೆಬಾಗಿದಂತೆ ನಾನೂ ದೇವರ ಚಿತ್ತಕ್ಕೆ ವಿನಮ್ರನಾಗಿರುವುದನ್ನು ಕಲಿಸಿರಿ. ನನ್ನ ಕೋರಿಕೆಗಳು ದೇವರ ಚಿತ್ತವಾಗಿದ್ದಲ್ಲಿ ನನಗೆ ಕರುಣಿಸುವಂತೆ ನಿಮ್ಮ ಮಧ್ಯಸ್ಥಿಕೆಯಲ್ಲಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ನನ್ನ ಕೋರಿಕೆಗಾಗಿ ಪರಮನ ಸನ್ನಿಧಿಯಲ್ಲಿ ಪ್ರಾರ್ಥಿಸಿರಿ. (ಕೋರಿಕೆಯನ್ನು ನಿವೇದಿಸುವುದು)

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಎಂಟು

ಓ ಪರಿಶುದ್ಧ ಸಂತ ಅಂತೋಣಿಯವರೇ, ಕಷ್ಟದಲ್ಲಿ ಮೊರೆಯಿಡುವವರಿಗೆ ಆಪ್ತರು ನೀವು, ನಿಮ್ಮ ಆಶ್ರಯದಲ್ಲಿ ನಾನು ನಂಬಿಕೆಯಿರಿಸಿದ್ದೇನೆ, ಮಾತ್ರವಲ್ಲ, ನೀವು ದೇವರಿಂದ ನನ್ನ ಕೋರಿಕೆಯನ್ನು ಪಡೆದು ಕೊಡಲು ಶಕ್ತರು ಎಂಬುದನ್ನು ವಿಶ್ವಾಸಿಸುತ್ತೇನೆ. ನನ್ನ ಅಗತ್ಯವನ್ನು ಕಂಡು ಸರಿಯೆಂದು ತೋರಿದಲ್ಲಿ ಸ್ವರ್ಗದ ರಾಣಿಯಾದ ಮಾತೆಯ ವಿಜ್ಞಾಪನೆಯನ್ನು ಅನುಸರಿಸಿ ಪರಮನಿಂದ ಇದನ್ನು ಪಡೆದುಕೊಡಿರಿ. (ಕೋರಿಕೆಯನ್ನು ನಿವೇದಿಸುವುದು)

ಪ್ರಭು ಕಲಿಸಿದ ಪ್ರಾರ್ಥನೆ

ನಮೋ ಮರಿಯಾ ಪ್ರಾರ್ಥನೆ

ಪಿತನಿಗೂ, ಸುತನಿಗೂ…

ಪಾದ್ವದ ಸಂತ ಅಂತೋಣಿಯವರೇ, ನಮಗಾಗಿ ಪ್ರಾರ್ಥಿಸಿರಿ

ಪ್ರಾರ್ಥಿಸೋಣ

ಪ್ರಭುವಾದ ದೇವರೇ, ನಿಮ್ಮ ಪ್ರೀತಿಪಾತ್ರರಾದ ಸಂತ ಅಂತೋಣಿಯವರನ್ನು ಭಕ್ತಿಯಿಂದ ಸ್ಮರಿಸುವ ನಿಮ್ಮ ಮಕ್ಕಳಾದ ನಮ್ಮನ್ನು ಅವರ ದಯಾಭರಿತ ಬಿನ್ನಹಗಳ ಮೂಲಕ ಇಹಲೋಕದ ಕೇಡುಗಳಿಂದ ರಕ್ಷಿಸಿ, ಭೂಲೋಕ ಜೀವನಕ್ಕೆ ಬೇಕಾದ ವರಗಳನ್ನು ಮತ್ತು ಈ ಲೋಕದ ಜೀವನದ ಮುಕ್ತಾಯದ ನಂತರ ನಿತ್ಯಜೀವದ ಭಾಗ್ಯವನ್ನು ಅನುಗ್ರಹಿಸಬೇಕೆಂದು, ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮ್ಮನ್ನು ಪ್ರಾರ್ಥಿಸುತ್ತೇವೆ.

ದಿನ ಒಂಭತ್ತು

ಸಂತ ಅಂತೋಣಿಯವರೇ, ಮಾತೆಯ ಪರಮ ಭಕ್ತರು ಮತ್ತು ಆಕೆಯ ಕೈಗಳಿಂದ ಬಾಲಯೇಸುವನ್ನು ಪಡೆದುಕೊಂಡ ಸಂತ ಶ್ರೇಷ್ಠರು ನೀವು. ಆಕೆಯು ನಿಮ್ಮಲ್ಲಿ ಮಾತೃ ಪ್ರೀತಿಯಿಂದಲೂ, ವಾತ್ಸಲ್ಯದಿಂದಲೂ ಕೆಲವರಿಗೆ ಮಾತ್ರ ದೊರಕುವ ಈ ಸೌಭಾಗ್ಯವನ್ನು ಕರುಣಿಸಿದರು. ಆಕೆಯ ಮುಖಾಂತರ ನಿಮ್ಮ ತೋಳಿನಲ್ಲಿರುವ ಬಾಲಯೇಸುವಿಗೆ ನನ್ನ ಕೋರಿಕೆಯನ್ನು ತಿಳಿಸಿ ಪಡೆದುಕೊಡುವಂತೆ ನಿಮ್ಮನ್ನು ಅಂಗಲಾಚುತ್ತೇನೆ. (ಕೋರಿಕೆಯನ್ನು ನಿವೇದಿಸುವುದು)