ಸಾಧಾರಣ ಕಾಲದ 13ನೇ ಭಾನುವಾರ

ದಿನಾಂಕ 28-06-2020

ಪ್ರಕಟಣೆಗಳು 

  • 29-06-2020, ಸೋಮವಾರ, ಪ್ರೇಷಿತರಾದ ಸಂತ ಪೇತ್ರ ಮತ್ತು ಪೌಲರ ಹಬ್ಬ
  • 03-07-2020, ಶುಕ್ರವಾರ, ಭಾರತದ ಪಾಲಕ ಪ್ರೇಷಿತ ಸಂತ ತೋಮಸರ ಹಬ್ಬ
  • 03-07-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಕೋರೊನಾ ವ್ಯಾಧಿಯ ಈ ಸಂಕಷ್ಟ ಸಮಯದಲ್ಲಿ ನಮ್ಮ ಧರ್ಮಕೇಂದ್ರದ 15 ಬಡ ಕುಟುಂಬಗಳಿಗೆ ಸಹಾಯ ನೀಡಿದ ಫಾ. ಎಲಿಯಾಸ್ಮತ್ತು ಬೆಂಗಳೂರಿನ ಒಡನಾಡಿ ತಂಡಕ್ಕೆ ತುಂಬು ಮನದ ಧನ್ಯವಾದಗಳು.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
  • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.

ಧನ್ಯವಾದಗಳು

ಸಹಿ/-