ಲೊರೆಟ್ಟೋದ ಮಾತೆಯ ಮನವಿಮಾಲೆಗೆ ಮೂರು ಹೊಸ ಬಿನ್ನಹಗಳು

“ಮಾತೆರ್ ಮಿಸೆರಿಕೊರ್ದೆಯಿ” ಅಂದರೆ, “ದಯೆಯ ತಾಯಿಯೇ”; “ಮಾತೆರ್ ಸ್ಪೇಯಿ” ಅಂದರೆ, “ನಂಬಿಕೆಯ ತಾಯೇ” ಮತ್ತು “ಸೋಲೆಸಿಯುಂ ಮೈಗ್ರಾನ್ತಿಯುಂ” ಅಂದರೆ, “ವಲಸಿಗರ ಸಾಂತ್ವನವೇ” ಎಂಬ ಮೂರು ಹೊಸ ಬಿನ್ನಹಗಳನ್ನು ಜಪಸರ ಪ್ರಾರ್ಥನೆಯ ಕೊನೆಯಲ್ಲಿ ಹೇಳುವ ಲೊರೆಟ್ಟೋದ ಮಾತೆಯ ಮನವಿಮಾಲೆಗೆ ಸೇರಿಸಿದ್ದಾರೆ.

ಪೋಪ್ ಫ್ರಾನ್ಸಿಸ್ರು ಜೂನ್ 20, ಶನಿವಾರದಂದು “ನಿಷ್ಕಳಂಕ ಹೃದಯದ ಮಾತೆಯ ಹಬ್ಬ”ದ ದಿನದಂದು “ದೈವಿಕ ಆರಾಧನೆ ಮತ್ತು ಸಂಸ್ಕಾರದ ಶಿಸ್ತುಗಳ ಸಭೆ”ಯಿಂದ ಮಾತೆಯ ಮನವಿ ಮಾಲೆಗೆ ಮಾಡಿದ ಹೊಸ ಸೇರ್ಪಡೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದರು.

ವಿಶ್ವಾದ್ಯಂತ ಬಿಷಪ್‌ಗಳ ಸಮ್ಮೇಳನಗಳ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಸಭೆಯ ಪ್ರಾಂಶುಪಾಲರಾದ ಕಾರ್ಡಿನಲ್ ರಾಬರ್ಟ್ ಸಾರಾ ಮತ್ತು ಅದರ ಕಾರ್ಯದರ್ಶಿ ಆರ್ಚ್‌ಬಿಷಪ್ ಆರ್ಥರ್ ರೋಚೆ, ಶತಮಾನಗಳಿಂದಲೂ ಕ್ರಿಶ್ಚಿಯನ್ನರು ಅಸಂಖ್ಯಾತ ಬಿನ್ನಹಗಳು ಮತ್ತು ಶೀರ್ಷಿಕೆಗಳನ್ನು “ಕ್ರಿಸ್ತನೊಂದಿಗಿನ ಮುಖಾಮುಖಿಗೆ ಸಹಾಯ ಮತ್ತು ಖಚಿತವಾದ ಮಾರ್ಗವಾಗಿ” ತಾಯಿ ಮರಿಯಳನ್ನು ಆಶ್ರಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಕಾಲದ ಅಗತ್ಯ

“ದೇವರ ಜನರು, ಅನಿಶ್ಚಿತತೆ ಮತ್ತು ಭಯ ಹುಟ್ಟಿಸುವ ಪ್ರಸ್ತುತ ಕಾಲವನ್ನು ಉಲ್ಲೇಖಿಸುತ್ತಾ,” “ಪ್ರೀತಿಯಿಂದ ಮತ್ತು ನಂಬಿಕೆಯಿಂದ ತುಂಬಿರುವ ಮಾತೆಗೆ ಭಕ್ತಿಯಿಂದ ಸಹಾಯ ಮಾಡಿ “ಎಂದು ಅವರು ಬೇಡುತ್ತಾರೆ.
ನಿರ್ದೇಶನಗಳ ಪ್ರಕಾರ, “ಕರುಣೆಯ ತಾಯಿ” ಎಂಬ ಬಿನ್ನಹವನ್ನು “ಧರ್ಮಸಭೆಯ ತಾಯೇ” ನಂತರ, “ನಂಬಿಕೆಯ ತಾಯಿ” ಎಂಬ ಬಿನ್ನಹವನ್ನು “ದೇವಪ್ರಸಾದದ ತಾಯೇ” ಮತ್ತು ಪಾಪಿಗಳ ಆಶ್ರಯವೇ” ನಂತರ “ವಲಸಿಗರ ಸಾಂತ್ವನವೇ” ಎಂಬುದನ್ನು ಸೇರಿಸಬೇಕು.

ಸಂದರ್ಶನವೊಂದರಲ್ಲಿ, ಆರ್ಚ್ಬಿಷಪ್ ರೋಚೆ ಈ ಬಿನ್ನಹಗಳು “ನಾವು ಬದುಕುತ್ತಿರುವ ಸಮಯದ ನೈಜತೆಗೆ ಸರಿಯಾದವು” ಎಂದು ವಿವರಿಸಿದರು. ವ್ಯಾಟಿಕನ್ ನ್ಯೂಸ್ ಜೊತೆ ಮಾತನಾಡಿದ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮಾತ್ರವಲ್ಲದೆ ಬಡತನ, ಸಂಘರ್ಷ ಮತ್ತು ಇತರ ಕಾರಣಗಳಿಂದಾಗಿ ತಮ್ಮ ಮನೆಗಳಿಂದ ಬಲವಂತವಾಗಿ ಅನೇಕ ವಿಧಗಳಲ್ಲಿ ಪೀಡಿತರಾಗಿರುವವರು ಮಾತೆಯನ್ನು ಸಹಾಯಕ್ಕಾಗಿ ಬೇಡುತ್ತಾರೆ.

ಬಿನ್ನಹಗಳು ಹೊಸತಲ್ಲ!

ಆರ್ಚ್‌ಬಿಷಪ್ ಆರ್ಥರ್ ರೋಚೆ ಹೇಳಿದರು, “ಪೋಪ್ ಫ್ರಾನ್ಸಿಸ್ಸರು ಈಗಾಗಲೇ ಶತಮಾನಗಳಿಂದಲೇ ಧರ್ಮಸಭೆಯ ಪ್ರಾರ್ಥನೆಯ ಇತಿಹಾಸದಲ್ಲಿ ಒಂದಾಗಿರುವ “ನಮೋ ರಾಣಿಯೇ” ಪ್ರಾರ್ಥನೆಯಲ್ಲಿರುವ ಬಿನ್ನಹಗಳನ್ನು ಮನವಿಮಾಲೆಯಲ್ಲಿ ಸೇರಿಸಿದ್ದಾರೆಯೇ ವಿನಃ ಇವು ಹೊಸದಲ್ಲ”. ಮುಂದುವರಿಸುತ್ತಾ, “ಈ ಮೂರು ಬಿನ್ನಹಗಳನ್ನು, ಜಗತ್ತಿನಾದ್ಯಂತ ಜನರು ಪ್ರೀತಿಯಿಂದ ಹೇಳುವ ಈ ಮನವಿಮಾಲೆಗೆ ಸೇರಿಸಲಾಗಿದೆ”. “ಪ್ರಪಂಚಕ್ಕೆ ಈಗ ಮಾತೆಯ ಬಿನ್ನಹ ಮತ್ತು ಸಹಾಯ ಹಿಂದೆಂದಿಗಿಂತಲೂ ಹೆಚ್ಚಾಗಿ ಅವಶ್ಯವಾಗಿದೆ, ಅದಕ್ಕೆ ಅನುಸರಿಸಿಯೇ ಈ ಬಿನ್ನಹಗಳನ್ನು ಸೇರಿಸಿದುದಾಗಿದೆ”.

ಲೊರೆಟ್ಟೋದ ಮನವಿಮಾಲೆ ಎಂದರೇನು?

1531ರಲ್ಲಿ ಇಟಲಿಯ ಲೊರೆಟ್ಟೊದ ಮಾತೆ ಮರಿಯಳ ಪುಣ್ಯಕ್ಷೇತ್ರದಲ್ಲಿ ಬಳಸಲಾಗುತ್ತಿತ್ತು, ಅಲ್ಲಿಂದ ಮಾತೆಯ ಮನವಿಮಾಲೆಗೆ ಲೊರೆಟ್ಟೋದ ಮನವಿಮಾಲೆ ಎಂಬ ಹೆಸರು ಬಂತು. ಪೋಪ್ 5ನೇ ಸಿಕ್ಸ್ಟಸ್ ರವರು 1587ರಲ್ಲಿ ಮಾತೆಯ ಹೆಸರಿನಲ್ಲಿ ಬಳಸುತ್ತಿದ್ದ ಬೇರೆ ಎಲ್ಲಾ ರೀತಿಯ ಮನವಿ ಮಾಲೆಗಳನ್ನು ತೊರೆದು ಈ ಮನವಿಮಾಲೆಯನ್ನು ಮಾತ್ರ ಬಳಸುವಂತೆ ಅಧಿಕೃತವಾಗಿ ಘೋಷಿಸಿದರು. ಲೊರೆಟ್ಟೋದ ಮನವಿಮಾಲೆ ಮಾತ್ರವೇ ಮಾತೆಗೆ ಹೇಳಲಾಗುವ ಅಧಿಕೃತ ಮನವಿ ಮಾಲೆ; ಆಫೀಷಿಯೋ ಮರಿಯಾನ ಎಂಬ ಮನವಿಮಾಲೆ ಮತ್ತು ಬೇರೆ ಮನವಿಮಾಲೆಗಳು ಇದ್ದರೂ ಅವು ಖಾಸಗಿ ಉಪಯೋಗಕ್ಕೆ ಮಾತ್ರ.

ಸಮಯಾನುಸಮಯಕ್ಕೆ ಈವರೆಗೆ 7 ಬಿನ್ನಹಗಳನ್ನು ಸೇರಿಸಲಾಗಿದೆ. 1980ರಲ್ಲಿ ಸಂತ ಪೋಪ್ ದ್ವೀತಿಯ ಜಾನ್ ಪೌಲರು ‘ಧರ್ಮಸಭೆಯ ತಾಯೇ’ ಮತ್ತು 1995ರಲ್ಲಿ ‘ಕುಟುಂಬಗಳ ರಾಣಿಯೇ’ ಎಂಬುದನ್ನು ಸೇರಿಸಿದ್ದರು. ಈಗ ಪೋಪ್ ಫ್ರಾನ್ಸಿಸ್ಸರು 3 ಹೊಸ ಬೇಡಿಕೆಗಳನ್ನು ಸೇರಿಸಿದ್ದಾರೆ.