ಮನವಿಮಾಲೆಗಳು

ಮನುಕುಲವನ್ನು ಯೇಸುವಿನ ದಿವ್ಯಹೃದಯಕ್ಕೆ ಒಪ್ಪಿಸಿಕೊಡುವ ಪ್ರಾರ್ಥನೆ

ಮನುಕುಲದ ರಕ್ಷಕರಾಗಿರುವ ಮಧುರವಾದ ಯೇಸುವೇ, ಇಗೋ ನಿಮ್ಮ ದಿವ್ಯ ಪೀಠದ ಮುಂದೆ ಸಾಷ್ಟಾಂಗವಾಗಿ ಅಡ್ಡಬಿದ್ದಿರುವ ನಮ್ಮನ್ನು ಈಕ್ಷಿಸಿರಿ ಸ್ವಾಮಿ. ನಾವು ನಿಮ್ಮವರಾಗಿರುತ್ತೇವೆ ಮತ್ತು ಯಾವಾಗಲೂ ನಿಮ್ಮವರಾಗಿರಲೂ ಆಶಿಸುತ್ತೇವೆ. ಆದರೂ, ನಾವು ನಿಮ್ಮೊಂದಿಗೆ ಅಧಿಕ ಐಕ್ಯವುಳ್ಳವರಾಗಿರುವ ಹಾಗೆ, ಇಗೋ, ನಾವು ಒಬ್ಬೊಬ್ಬರು ನಮ್ಮನ್ನು ಈ ದಿನ ಮನಃಪೂರ್ವಕವಾಗಿ ನಿಮ್ಮ ದಿವ್ಯ ಹೃದಯಕ್ಕೆ ಒಪ್ಪಿಸಿಕೊಡುತ್ತೇವೆ. ಯಥಾರ್ಥವಾಗಿ ಅನೇಕರು ನಿಮ್ಮನ್ನು ಎಂದಿಗೂ ಅರಿತುಕೊಳ್ಳಲೇ ಇಲ್ಲ. ಅನೇಕರು ನಿಮ್ಮ ಆಜ್ಞೆಗಳನ್ನು ತೃಣೀಕರಿಸುವುದಲ್ಲದೇ ನಿಮ್ಮನ್ನು ತ್ಯಜಿಸಿಬಿಟ್ಟಿದ್ದಾರೆ. ಮಹಾಮರುಕವುಳ್ಳ ಯೇಸುವೇ, ಅಂತಹವರ ಮೇಲೆ ನಿಮ್ಮ ದಯೆಯನ್ನು ತೋರಿ ನಿಮ್ಮ ದಿವ್ಯ ಹೃದಯದೆಡೆಗೆ ಅವರನ್ನು ಸೇರಿಸಿಕೊಳ್ಳಿರಿ.

ಓ ಪ್ರಭುವೇ, ನಿಮ್ಮನ್ನು ಎಂದಿಗೂ ಅಗಲಿಹೋಗದೇ ಪ್ರಾಮಾಣಿಕವಾಗಿ ಇರುವವರಿಗೆ ಮಾತ್ರವಲ್ಲ, ನಿಮ್ಮನ್ನು ಬಿಟ್ಟು ಬೇಡವೆಂದು ತ್ಯಜಿಸಿಹೋದ ಜನರಿಗೂ ಅರಸರಾಗಿರಿ. ಇವರು ಬಡತನದಿಂದಲೂ ಹಸಿವಿನಿಂದಲೂ ಸಾಯದಂತೆ ತಮ್ಮ ತಂದೆಯ ಮನೆಗೆ ಶೀಘ್ರವಾಗಿ ಹಿಂದಿರುವಂತೆ ಮಾಡಿರಿ. ಅಬದ್ದವಾದ ಅಸತ್ಯದಿಂದ ವಂಚಿಸಲ್ಪಟ್ಟವರಿಗೂ, ವೈಮನಸ್ಸಿನಿಂದ ಅಗಲಿ ದೂರಹೋಗಿರುವವರಿಗೂ ರಾಜರಾಗಿರಿ. ಸ್ವಲ್ಪ ಕಾಲದಲ್ಲಿ ಒಂದೇ ಮಂದೆಯೂ ಒಬ್ಬರೇ ಮೇಷಪಾಲಕರೂ ಇರುವಂತೆ ನಿಮ್ಮ ಸತ್ಯದ ಏಕ ವಿಶ್ವಾಸದ ಕರೆಗೆ ಅವರನ್ನು ಸೇರಿಸ ಕರುಣಿಸಿರಿ.

ಓ ಯೇಸುವೇ, ನಿಮ್ಮ ಧರ್ಮಸಭೆಗೆ ಪೂರ್ಣ ಸ್ವಾತಂತ್ರ್ಯವನ್ನೂ ರಕ್ಷಣೆಯನ್ನೂ ದಯಪಾಲಿಸಿರಿ. ಸಮಸ್ತ ಜನಾಂಗಗಳಿಗೆ ಶಾಂತಿ-ಸಮಾಧಾನವನ್ನೂ, ಐಕ್ಯತೆಯನ್ನೂ ನೀಡಿರಿ. ನಮ್ಮ ರಕ್ಷಕರ ದಿವ್ಯ ಹೃದಯಕ್ಕೆ ಸ್ತುತಿಯೂ ಗೌರವವೂ ಮಹಿಮೆಯೂ ಯುಗಯುಗಾಂತರಕ್ಕೂ ಸಲ್ಲಲಿ ಎಂಬ ಏಕ ಶಬ್ದವೂ ಭೂಲೋಕದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಕೇಳಿಸುವಂತೆ ಕೃಪೆಮಾಡ ಕರುಣಿಸಿರಿ ಸ್ವಾಮಿ, ಆಮೆನ್‍.

ಯೇಸುವಿನ ಪವಿತ್ರ ಹೃದಯದ ಮನವಿ ಮಾಲೆ

ಸ್ವಾಮಿ, ದಯೆ ತೋರಿ

ಕ್ರಿಸ್ತರೇ, ದಯೆ ತೋರಿ

ಸ್ವಾಮಿ, ದಯೆ ತೋರಿ

ಕ್ರಿಸ್ತರೇ, ನಮ್ಮನ್ನು ಆಲೈಸಿರಿ

ಕ್ರಿಸ್ತರೇ, ನಮ್ಮ ಪ್ರಾರ್ಥನೆಯನ್ನು ಚೆನ್ನಾಗಿ ಆಲೈಸಿರಿ

ಪರಲೋಕ ಪಿತ ದೇವರೇ, ನಮಗೆ ದಯೆ ತೋರಿ ಸ್ವಾಮಿ

ಲೋಕರಕ್ಷಕರಾದ ಸುತ ದೇವರೇ, ನಮಗೆ ದಯೆ ತೋರಿ ಸ್ವಾಮಿ

ಪವಿತ್ರಾತ್ಮ ದೇವರೇ, ನಮಗೆ ದಯೆ ತೋರಿ ಸ್ವಾಮಿ

ಪರಮ ತ್ರಿತ್ವರಾದ ಏಕ ದೇವರೇ, ನಮಗೆ ದಯೆ ತೋರಿ ಸ್ವಾಮಿ

ನಿತ್ಯ ಪಿತನ ಸುತನಾಗಿರುವ ಯೇಸುವಿನ ದಿವ್ಯ ಹೃದಯವೇ, ನಮಗೆ ದಯೆ ತೋರಿ ಸ್ವಾಮಿ

ಕನ್ಯಾಮಾತೆಯ ಗರ್ಭದಲ್ಲಿ ಪವಿತ್ರಾತ್ಮರಿಂದ ಉದ್ಭವಿಸಿದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ದೇವವಾರ್ತೆಯಾದ ಸುತನೊಂದಿಗೆ ಐಕ್ಯವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಮಿತಿಯಿಲ್ಲದ ಮಹಿಮೆ ಪ್ರತಾಪವುಳ್ಳ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸರ್ವೇಶ್ವರರ ಪರಿಶುದ್ದ ಆಲಯವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಮಹೋನ್ನತ ದೇವರ ವಾಸಸ್ಥಳವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸರ್ವೇಶ್ವರರ ಮಂದಿರವೂ ಸ್ವರ್ಗದ ಬಾಗಿಲೂ ಆಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸ್ನೇಹಾಗ್ನಿಯೂ ಜ್ವಲಿಸಿ ಉರಿಯುವ ಕುಲುಮೆಯಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನೀತಿಯೂ, ಸ್ನೇಹವೂ ನೆಲೆಸಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ದಯಾಳತ್ವದಿಂದಲೂ ಸ್ನೇಹದಿಂದಲೂ ಪೂರ್ಣವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸಮಸ್ತ ಪುಣ್ಯಗಳು ಸಂಪೂರ್ಣವಾಗಿ ತುಂಬಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸರ್ವಸ್ತುತಿಗೆ ಅತಿ ಯೋಗ್ಯವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸರ್ವ ಹೃದಯಗಳಿಗೆ ರಾಜರೂ, ಕೇಂದ್ರವೂ ಆಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಜ್ಞಾನವೂ ವಿವೇಕವೂ ತುಂಬಿದ ಬೊಕ್ಕಸವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ದೈವತ್ವದ ಸಂಪೂರ್ಣತೆಯೂ ನೆಲೆಸಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಿಮ್ಮ ಪಿತನಿಗೆ ಅತಿ ಪ್ರಿಯವಾದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಿಮ್ಮಲ್ಲಿ ಸಂಪೂರ್ಣವಾಗಿರುವ ಉನ್ನತ ಗುಣಗಳಿಂದ ನಮ್ಮನ್ನು ತೃಪ್ತಿಪಡಿಸುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಿತ್ಯ ಶಿಖರಗಳ ಅಭಿಲಾಷೆಯಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ತಾಳ್ಮೆಯೂ ಮಹಾಕೃಪೆಯೂ ಆಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಿಮ್ಮನ್ನು ಪ್ರಾರ್ಥಿಸುವ ಎಲ್ಲರಿಗೂ ಹೇರಳ ವರಪ್ರಸಾದಗಳನ್ನು ದಯಪಾಲಿಸುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಜೀವಕ್ಕೂ ಪರಿಶುದ್ದತೆಗೂ ಬುಗ್ಗೆಯಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಮ್ಮ ಪಾಪಗಳನ್ನು ಪರಿಹರಿಸುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಿಂದೆ ಅವಮಾನಗಳಿಂದ ತುಂಬಿಸಲಾದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಮ್ಮ ಅಕ್ರಮಗಳ ನಿಮಿತ್ತ ಜರ್ಜರಿತಗೊಂಡ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಮರಣದವರೆಗೂ ವಿಧೇಯರಾದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಈಟಿಯಿಂದ ತಿವಿಯಲಾದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸರ್ವ ಉಪಶಮನಗಳ ಬುಗ್ಗೆಯಾದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಮ್ಮ ಜೀವವೂ ಪುನರುತ್ಥಾನವೂ ಆಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಮ್ಮನ್ನು ಸಮಾಧಾನ ಹಾಗೂ ಸಂಧಾನಪಡಿಸುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಪಾಪಿಗಳಿಗಾಗಿ ಬಲಿಯಾದ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ನಿಮ್ಮನ್ನು ನಂಬುವವರಿಗೆ ರಕ್ಷಣೆಯಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಮೃತರಾದವರಿಗೆ ನಂಬಿಕೆಯಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಸಕಲ ವಿಶ್ವಾಸಿಗಳಿಗೆ ಆನಂದವಾಗಿರುವ ಯೇಸುವಿನ ದಿವ್ಯ ಹೃದಯವೇ ನಮಗೆ ದಯೆ ತೋರಿ ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮ್ಮನ್ನು ಕ್ಷಮಿಸಿರಿ ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮ್ಮ ಪ್ರಾರ್ಥನೆಯನ್ನು ಆಲಿಸಿರಿ ಸ್ವಾಮಿ

ಲೋಕದ ಪಾಪಗಳನ್ನು ಪರಿಹರಿಸುವ ದೇವರ ಕುರಿಮರಿಯೇ, ನಮಗೆ ದಯೆ ತೋರಿ ಸ್ವಾಮಿ

ಶ್ಲೋಕ: ಶಾಂತ ಹೃದಯರೂ ದೀನ ಹೃದಯರೂ ಆದ ಯೇಸುವೇ

ಪ್ರತಿಶ್ಲೋಕ: ನಮ್ಮ ಹೃದಯವನ್ನು ನಿಮ್ಮ ಹೃದಯದಂತೆ ಮಾಡ ಕರುಣಿಸಿರಿ

ಪ್ರಾರ್ಥಿಸೋಣ

ಸರ್ವಶಕ್ತರೂ, ನಿತ್ಯರೂ ಆಗಿರುವ ಸರ್ವೇಶ್ವರಾ, ನಿಮ್ಮ ಅತಿಪ್ರಿಯರಾದ ಸುತನ ಹೃದಯವನ್ನೂ, ಅವರು ಪಾಪಿಷ್ಟರ ಹೆಸರಿನಲ್ಲಿ ನಿಮಗೆ ಸಲ್ಲಿಸಿದ ಸ್ತುತಿ ಪರಿಹಾರಗಳನ್ನು ಕರುಣೆಯಿಂದ ಈಕ್ಷಿಸಿರಿ. ನಿಮ್ಮ ಕೃಪೆಯನ್ನು ವಿಜ್ಞಾಪಿಸುವವರಿಗೆ ಕ್ಷಮೆಯನ್ನು ಪಾಲಿಸಿರಿ. ನಿಮ್ಮೊಂದಿಗೂ ಪವಿತ್ರಾತ್ಮರೊಂದಿಗೂ ಸದಾಕಾಲ ಜೀವಿಸಿ ಆಳುವ ನಿಮ್ಮ ಕುಮಾರರಾದ ಯೇಸುಕ್ರಿಸ್ತರ ಮುಖಾಂತರ ನಾವು ಪ್ರಾರ್ಥಿಸುವುದನ್ನು ದಯಪಾಲಿಸಿರಿ ಸ್ವಾಮಿ, ಆಮೆನ್.