ದೈವೀಕ ಕರುಣೆಯ ಜಪಮಾಲೆ

ಪ್ರಾರಂಭ ಪ್ರಾರ್ಥನೆ

ಯೇಸುವೇ, ನಿಮ್ಮ  ಶಿಲುಬೆ ಮರಣದ ಫಲವಾಗಿ ಎಲ್ಲಾ ಆತ್ಮಗಳ ರಕ್ಷಣೆಗೆ ಅವಶ್ಯಕವಾಗಿದ್ದ ನಿತ್ಯ ಜೀವಜಲದ ಬುಗ್ಗೆಯನ್ನು ಕರುಣೆಯಿಂದ ಮಹಾ ಸಾಗರವನ್ನು ನೀವು ತೆರೆದು ಕೊಟ್ಟಿರಿ. ಜೀವದ ಮೂಲವೂ ದೈವೀ ಕರುಣೆಯೂ ಆಗಿರುವ ದೇವರೇ, ನಮ್ಮ ಮೇಲೆಯೂ ಈ ಭೂಲೋಕದ ಮೇಲೆಯೂ ಕರುಣೆಯ ಮಳೆಯನ್ನು ಸುರಿಸಿರಿ. ಈಟಿಯಿಂದ ತಿವಿಯಲ್ಪಟ್ಟ ನಿಮ್ಮ ಹೃದಯದಿಂದ ರಕ್ತದ ಮತ್ತು ಜಲದ ಬುಗ್ಗೆಯನ್ನು ನಾನು ಆಶ್ರಯಿಸಿದ್ದೇನೆ.

ಜಪಸರ ಹೇಳುವ ವಿಧಾನ

ಶಿಲುಬೆಯ ಗುರುತು-ಪ್ರೇಷಿತರ ವಿಶ್ವಾಸ ಸಂಗ್ರಹ-1 ಪರಲೋಕ ಪ್ರಾರ್ಥನೆ-3 ನಮೋ ಮರಿಯ ಪ್ರಾರ್ಥನೆ-ಪರಮತ್ರಿತ್ವಕ್ಕೆ ಸ್ತೋತ್ರದ ನಂತರ

ದೊಡ್ಡ ಮಣಿಯಲ್ಲಿ

ಸರ್ವಶಕ್ತ ನಿತ್ಯ ಪಿತರೇ ನಮ್ಮ ಮತ್ತು ಭೂಲೋಕದಲ್ಲಿರುವ ಪ್ರತಿಯೊಬ್ಬರ ಪಾಪ ಪರಿಹಾರಕ್ಕಾಗಿ ನಮ್ಮ ಕರ್ತರು, ರಕ್ಷಕರೂ ಆದ ಯೇಸುಕ್ರಿಸ್ತರ ಪೂಜ್ಯ ಶರೀರ ಮತ್ತು ರಕ್ತವನ್ನು, ಆತ್ಮ ಮತ್ತು ದೈವತ್ವವನ್ನು ನಿಮಗೆ ಕಾಣಿಕೆಯಾಗಿ ಅರ್ಪಿಸುತ್ತೇವೆ.

ಚಿಕ್ಕಮಣಿಗಳಲ್ಲಿ

ಅಪ್ಪಾ ಪಿತನೇ, ಯೇಸುವಿನ ಅತಿ ದಾರುಣವಾದ ಶಿಲುಬೆ ಯಾತನೆ ಮತ್ತು ಮರಣದ ಫಲವಾಗಿ ನಮ್ಮ ಮೇಲೆಯೂ ಇಡೀ ಭೂಲೋಕದ ಮೇಲೆಯೂ ಕರುಣೆ ತೋರಿರಿ.

ಹತ್ತು ಮಣಿಗಳ ನಂತರ

ಪರಿಶುದ್ಧರು ಸರ್ವಶಕ್ತರೂ ಚಿರಂಜೀವಿಯೂ ಆದ ದೇವರೇ ನಮ್ಮ ಹಾಗೂ ಇಡೀ ಭೂಲೋಕದ ಮೇಲೆ ನಿಮ್ಮ ಕರುಣೆಯನ್ನು ತೋರಿರಿ (3 ಬಾರಿ)