ಕಿರು ಧರ್ಮೋಪದೇಶ

ದೇವರ ಹತ್ತು ಆಜ್ಞೆಗಳು

  1. ನಿಜವಾದ ಏಕ ದೇವರನ್ನು ಆರಾಧಿಸು.

  2. ದೇವರ ನಾಮವನ್ನು ವ್ಯರ್ಥವಾಗಿ ಉಚ್ಚರಿಬೇಡ.

  3. ದೇವರ ದಿನವನ್ನು ಪವಿತ್ರವಾಗಿ ಆಚರಿಸು.

  4. ನಿನ್ನ ತಂದೆ-ತಾಯಿಯನ್ನು ಗೌರವಿಸು.

  5. ಕೊಲೆ ಮಾಡಬೇಡ.

  6. ವ್ಯಭಿಚಾರ ಮಾಡಬೇಡ.

  7. ಕದಿಯಬೇಡ.

  8. ಸುಳ್ಳುಸಾಕ್ಷಿ ಹೇಳಬೇಡ.

  9. ವ್ಯಭಿಚಾರಕ್ಕೆ ಆಸೆಪಡಬೇಡ.

  10. ಪರರ ವಸ್ತುಗಳಿಗೆ ಆಸೆಪಡಬೇಡ.

ಎರಡು ಮುಖ್ಯ ಆಜ್ಞೆಗಳು

  1. ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರನ್ನು ಪ್ರೀತಿಸು.

  2. ನಿನ್ನಂತೆಯೇ ಪರರನ್ನು ಪ್ರೀತಿಸು.

ಧರ್ಮಸಭೆಯ ಆರು ಕಟ್ಟಳೆಗಳು

  1. ಆದಿತ್ಯವಾರಗಳಲ್ಲೂ, ಕಟ್ಟಳೆಯ ಹಬ್ಬಗಳಲ್ಲಿಯೂ ಪೂರ್ಣ ಬಲಿಪೂಜೆಯಲ್ಲಿ ಭಾಗವಹಿಸು.

  2. ವರ್ಷಕೊಮ್ಮೆಯಾದರೂ ಪಾಪ ನಿವೇದನೆ ಮಾಡು.

  3. ಪಾಸ್ಕ ಕಾಲದಲ್ಲಿ ಪರಮಪ್ರಸಾದವನ್ನು ಸ್ವೀಕರಿಸು.

  4. ಉಪವಾಸ ಮತ್ತು ಮಾಂಸ ನಿರೋದನೆಯ ದಿನವನ್ನು ಆಚರಿಸು.

  5. ವಿಘ್ನವಿರುವಾಗ ಮದುವೆ ಆಗಬೇಡ.

  6. ಧರ್ಮಸಭೆಗೆ ನಿನ್ನ ಕೈಲಾದಷ್ಟು ಸಹಾಯ ಮಾಡು.

7 ಸಂಸ್ಕಾರಗಳು

ಜ್ಞಾನಸ್ನಾನ

ಧೃಡೀಕರಣ

ಪಶ್ಚಾತ್ತಾಪ

ಪರಮಪ್ರಸಾದ

ವಿವಾಹ

ಯಾಜಕಾಭಿಷೇಕ

ವ್ಯಾಧಿಸ್ಥರ ಅಭ್ಯಂಗ