26-01-2021, ಮಂಗಳವಾರ ಸಂತ ತಿಮೋಥಿ ಮತ್ತು ಸಂತ ತೀತರ ಸ್ಮರಣೆ
27-01-2021, ಬುಧವಾರ ಸಂತ ಆಂಜೆಲಾ ಮೆರಿಚಿಯವರ ಸ್ಮರಣೆ
28-01-2021, ಗುರುವಾರ ಸಂತ ಥಾಮಸ್ ಅಕ್ವಿನಾಸರ ಸ್ಮರಣೆ
ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
ಬಲಿಪೂಜೆ ನಂತರ ಮರಿಯಮ್ಮನವರ ಸೈನ್ಯದ ಸಭೆ ಮತ್ತುಯುವಕ–ಯುವತಿಯರಿಗೆ ಸಭೆಇರುವುದು; ಸದಸ್ಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
ಬರುವ ಭಾನುವಾರ, 24-01-2021ರಂದು ಕುಟುಂಬ ಬೈಬಲ್ ಕ್ವಿಜ್ನ್ನು ಆಯೋಜಿಸುತ್ತಿದ್ದೇವೆ. ಪೂರ್ತಿ ಉತ್ತರಿಸಿ ಮೊದಲು ನೀಡಿದ ಕುಟುಂಬಕ್ಕೆ ವಿಶೇಷ ಬಹುಮಾನ ಮತ್ತು ಪೂರ್ತಿ ಸರಿ ಉತ್ತರ ನೀಡಿದ ಮೂರು ಕುಟುಂಬಕ್ಕೆ ಬಹುಮಾನವನ್ನು ನೀಡಲಾಗುವುದು. ಉತ್ತರ ಪತ್ರಿಕೆಯನ್ನು 07-02-2021 (15 ದಿನಗಳ ಸಮಯ)ರೊಳಗೆ ಹಿಂತಿರುಗಿಸಬೇಕು. (ಪ್ರಶ್ನೆಗಳನ್ನು ಆದಿಕಾಂಡ, ವಿಮೋಚನಾಕಾಂಡ, ಸಂಖ್ಯಾಕಾಂಡ, ಯಾಜಕಕಾಂಡ ಮತ್ತು ಧರ್ಮೋಪದೇಶಕಾಂಡದಿಂದ ಆರಿಸಿಕೊಳ್ಳಲಾಗಿದೆ).
ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಧರ್ಮೋಪದೇಶ ತರಗತಿಯ ಶಿಕ್ಷಕರಿಗೂ ಮತ್ತು ಮನುಕುಲ ಮಾತೆ ಗಾಯನ ವೃಂದದಸದಸ್ಯರಿಗೂ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಕಾರ್ಮೆಲ್ ಅಸೋಸಿಯೇಟ್ಸ್ ಸದಸ್ಯರನ್ನು ಆಹ್ವಾನಿಸುತ್ತೇನೆ.