ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನ ವೃಂದದ ಸದಸ್ಯರಿಗೆ ವಂದನೆಗಳು.
ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ, ಪಾಲನಾ ಸಮಿತಿ ಸದಸ್ಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
ಬಲಿಪೂಜೆ ನಂತರ ಯುವಕ–ಯುವತಿಯರಿಗೆ ಸಭೆಇರುವುದು; ಯುವಕ-ಯುವತಿಯರು ಭಾಗವಹಿಸುವಂತೆ ವಿನಂತಿಸುತ್ತೇನೆ.
ಬರುವ ಭಾನುವಾರ 20-12-2020ದಂದುಬಲಿಪೂಜೆಯ ನಂತರ ಒಂದು ಘಂಟೆ ಸಮಯ ಪರಮಪ್ರಸಾದ ಆರಾಧನೆ ಇರುತ್ತದೆ, ಈ ಸಮಯದಲ್ಲಿ ಪಾಪವಿಖ್ಯಾಪನೆಯನ್ನು ಕೇಳಲು ಗುರುಗಳು ಲಭ್ಯವಿರುತ್ತಾರೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಆಂತರಿಕವಾಗಿ ಸಿದ್ದರಾಗುವಂತೆ ಕೇಳಿಕೊಳ್ಳುತ್ತೇನೆ.
ಇಂದಿನ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಿದ ಸಂತ ಜಾನ್ ಬರ್ಕಮನ್ಸ್ ಪೀಠಸೇವಕರ ತಂಡವನ್ನು ಎಲ್ಲಾ ಕುಟುಂಬಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.
ಬರುವ ಭಾನುವಾರ ಬಲಿಪೂಜಾರಾಧನಾ ವಿಧಿಗೆ ಸಹಾಯ ಮಾಡಲು ಮನುಕುಲ ಮಾತೆ ಯುವ ಬಳಗವನ್ನು ಆಹ್ವಾನಿಸುತ್ತೇನೆ.