ಪಾಲನಾ ಸಮಿತಿಯ ಸದಸ್ಯರು ತಮ್ಮ ಆಯ್ಕೆ ದೇವರಿಂದಲೇ ಆದುದು ಮತ್ತು ಧರ್ಮಕೇಂದ್ರದ ಒಳಿತಿಗಾಗಿ ಗುರುಗಳೊಡನೆ ಶ್ರಮಿಸುವುದು ತಮ್ಮ ಕರ್ತವ್ಯ ಎಂಬುದನ್ನು ಮನಗಂಡು ಧರ್ಮಸಭೆಯ ಮತ್ತು ಗುರುಗಳ ಮಾರ್ಗದರ್ಶನ, ಆಧ್ಯಾತ್ಮಿಕ ತಿಳುವಳಿಕೆ, ತಿದ್ದುಪಡಿಗಳನ್ನು ತಾವೂ ಅರ್ಥೈಸಿಕೊಂಡು ಇತರರನ್ನೂ ವಿಶ್ವಾಸದಲ್ಲಿಯೂ, ದೈವಪ್ರೀತಿಯಲ್ಲಿಯೂ ಮುನ್ನಡೆಸುತ್ತಾರೆ.
ಪಾಲನಾ ಸಮಿತಿಯ ಸದಸ್ಯರಿಗೆ ತೋರುವ ಗೌರವ ಧರ್ಮಸಭೆಗೂ ಮತ್ತು ಅದರ ಮುಖಂಡರಿಗೂ ಎಂಬುದನ್ನೂ ಸರ್ವರೂ ಅರಿಯಬೇಕು.
ಪಾಲನಾ ಸಮಿತಿಯ ಸದಸ್ಯರು ತಮ್ಮ ವಲಯದಲ್ಲಿರುವ ಎಲ್ಲಾ ಕುಟುಂಬಗಳ ಜವಾಬ್ದಾರಿಯನ್ನು ಹೊತ್ತಿರುತ್ತಾರೆ. ಆದುದರಿಂದ, ವಲಯದ ಎಲ್ಲಾ ಸದಸ್ಯರು ಧರ್ಮಕೇಂದ್ರದ ಆಧ್ಯಾತ್ಮಿ ಮತ್ತಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅವರ ಮಾರ್ಗದರ್ಶನವನ್ನು ಇತರರು ಗೌರವಿಸಬೇಕು.
ಕುಟುಂಬ ವರದಿ ಪುಸ್ತಕ ಎನ್ನುವುದು ನಮ್ಮ ಧರ್ಮಕೇಂದ್ರಕ್ಕೆ ಸೇರಿದವರ ಗುರುತಿನ ಪತ್ರವಿದ್ದಂತೆ.
ಕುಟುಂಬದ ಪ್ರತಿ ವ್ಯಕ್ತಿಯೂ ಧರ್ಮಕೇಂದ್ರದ ಆಧ್ಯಾತ್ಮಿಕ ಮತ್ತು ಇತರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಇತರ ಕನಿಷ್ಠ ನಿಯಮಗಳನ್ನು ಪಾಲಿಸುವಂತವರಾಗಬೇಕು ಹಾಗೂ ಧರ್ಮಕೇಂದ್ರದ ವಿಷಯಗಳನ್ನು ಹಗುರವಾಗಿ ಪರಿಗಣಿಸಬಾರದು.
ಕುಟುಂಬ ಪುಸ್ತಕ ಹೊಂದಿರುವ ಮಾತ್ರಕ್ಕೆ ಆಧ್ಯಾತ್ಮಿಕ ಮತ್ತು ಇತರ ಸವಲತ್ತುಗಳು ತಮ್ಮ ಹಕ್ಕು ಎಂದು ಭಾವಿಸಬಾರದು.
ತಮ್ಮ ಅಗತ್ಯಗಳಿಗಾಗಿ ಧರ್ಮಕೇಂದ್ರದ ಗುರುಗಳನ್ನು ಕಾಣುವುದಿದ್ದಲ್ಲಿ ಪಾಲನಾ ಸಮಿತಿಯ ಸದಸ್ಯರೊಂದಿಗೆ ಗುರುಗಳನ್ನು ಕಾಣುವಂತೆ ಈ ಮೂಲಕ ತಿಳಿಸಲಾಗಿದೆ.
ಧರ್ಮಸಭೆಯ ಮತ್ತು ಧರ್ಮಕೇಂದ್ರದ ನೀತಿ-ಮಿಯಮಗಳನ್ನು ಪಾಲಿಸುತ್ತಾ ಪ್ರಭುಕ್ರಿಸ್ತರ ಶರೀರವಾಗಿರುವ ನಾವೆಲ್ಲರೂ ಅವರನ್ನು ಸೇರಲು ಶ್ರಮಿಸಬೇಕು.
ಭಾನುವಾರ ಮತ್ತು ಇತರ ಹಬ್ಬದ ದಿನಗಳಲ್ಲಿ ಕೆಳಗಿನ ಶಿಸ್ತುಗಳನ್ನು ಪಾಲಿಸುವಂತೆ ಕೇಳಿಕೊಳ್ಳಲಾಗಿದೆ:
ಬಲಿಪೂಜೆಗೆ ಮುಂಚೆಯೇ ಬಂದು ಪ್ರಾರ್ಥಿಸಿ ಸಿದ್ದರಾಗಿ.
ಮುಂದಿನ ಸಾಲಿನಿಂದ ಆಸನಗಳಲ್ಲಿ ಕುಳಿತುಕೊಳ್ಳಿ. ತಡವಾಗಿ ಬರುವವರು ಯಾರಿಗೂ ತೊಂದರೆಯಾಗದೆ ಹಿಂದಿನ ಆಸನಗಳನ್ನು ಪಡೆಯಲು ಸುಲಭವಾಗುತ್ತದೆ.
ಆಸನಗಳಲ್ಲಿ ಕುಳಿತುಕೊಳ್ಳಲು ಸಹೋ. ವಿಲಿಯಂ ಮತ್ತು ಸಹೋ. ಮೇರಿ ಅನಿತಾ ಸಹಾಯಮಾಡುತ್ತಾರೆ. ಅವರ ಮಾರ್ಗದರ್ಶನವನ್ನು ಅನುಸರಿಸಿ.
ಬಲಿಪೂಜೆಯಲ್ಲಿ ಪುಟ್ಟ ಮಕ್ಕಳು ಓಡಾಡಿಕೊಂಡು, ಆಡವಾಡಿ, ಕೂಗಾಡದಂತೆ ನೋಡಿಕೊಳ್ಳಿ, ಇದರಿಂದ, ಇತರರು ಶಾಂತವಾಗಿ ಬಲಿಪೂಜೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.
ಬಲಿಪೂಜೆಗೆ ಬಂದಾಗ ನಿಮ್ಮ ಮೊಬೈಲ್ ಫೋನ್ಗಳನ್ನು ನಿಶ್ಯಬ್ದಮಾಡಿ ಅಥವಾ ಆಫ್ ಮಾಡಿ.
ಸಹೋ. ವಿಲಿಯಂ ಮತ್ತು ಸಹೋ. ಅಂತೋಣಿ ವಿನ್ಸೆಂಟ್ ಬಲಿಪೂಜೆಯ ನಂತರ ಕುಟುಂಬ ವರಿಯನ್ನು ಪಡೆದುಕೊಳ್ಳುತ್ತಾರೆ. ಅವರ ಬಳಿ ಹಣ ಸಂದಾಯ ಮಾಡಿ ರಸೀದಿ ಪಡೆದುಕೊಳ್ಳಬಹುದು.
ಕೋವಿಡ್ ಖಾಯಿಲೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರದೊಂದಿಗೆ ಕೈ ಜೋಡಿಸಲು ಈ ಬಾರಿ ಕ್ಯಾರೆಲ್ಸ್ ಹಾಡಲು ಮನೆಗಳಿಗೆ ಧರ್ಮಕೇಂದ್ರದ ಭಜನಾ ಗುಂಪು ಬರುವುದಿಲ್ಲ.
ನಮ್ಮ ಧರ್ಮಕೇಂದ್ರದಲ್ಲಿ ಯಾರಾದರೂ ಮರಣಹೊಂದಿದಲ್ಲಿ ಜನ ಗುಂಪು ಸೇರುವುದನ್ನು ನಿಯಂತ್ರಿಸಲು ಮತ್ತು ಒಬ್ಬರಿಗೊಬ್ಬರು ಸಮೀಪ ಬರುವುದನ್ನು ತಪ್ಪಿಸಲು ಬರುವ ಈಸ್ಟರ್ ಹಬ್ಬದವರೆಗೆ ಬಲಿಪೂಜೆ ಇರುವುದಿಲ್ಲ, ಬದಲಿಗೆ, ಸಮಾಧಿಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಗಳು ಮಾತ್ರ ಇರುತ್ತವೆ.