ಪ್ರಕಟಣೆಗಳು 16-08-2020

ಸಾಧಾರಣ ಕಾಲದ 20ನೇ ಭಾನುವಾರ

 • 18-08-2020, ಮಂಗಳವಾರ, ಸಂತ ಹೆಲೆನ್‍ರ ಸ್ಮರಣೆ
 • 22-08-2020, ಶನಿವಾರ, ಸ್ವರ್ಗರಾಣಿ ಮಾತೆ ಮರಿಯಳ ಹಬ್ಬ
 • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
 • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
 • ಬಲಿಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ ಕನ್ಯಾಭಗಿನಿಯರಿಗೆ ಮತ್ತು ಯುವಕ-ಯುವತಿಯರಿಗೆ ಕೃತಜ್ಞತೆಗಳು.
 • ಸಂತ ಜಾನ್‍ರ ವಿದ್ಯಾಸಂಸ್ಥೆಗಳು ಮತ್ತು ಕಾರ್ಮೆಲ್‍ ವಿದ್ಯಾಸಂಸ್ಥೆಗಳಲ್ಲಿ SSLC & PUC ಪರೀಕ್ಷೆಯಲ್ಲಿ ಈ ಬಾರಿಯೂ ಉತ್ತಮ ಫಲಿತಾಂಶ ದಾಖಲಿಸಿರುತ್ತಾರೆ. ವಿದ್ಯಾರ್ಥಿಗಳು ಮತ್ತು ಇದಕ್ಕಾಗಿ ದುಡಿದ ಎಲ್ಲಾ ಶಿಕ್ಷಕರಿಗೆ ಅಭಿನಂದನೆಗಳು.
 • ನಮ್ಮ ಧರ್ಮಕೇಂದ್ರದ ಸುಮಾರು 40 ಕುಟುಂಬಗಳಿಗೆ ಸಹಾಯಮಾಡಿದ ನಿಮಗೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ವಿಶೇಷವಾಗಿ ಶ್ರೀಮತಿ ಅನಿತಾ ಲೂಯಿಸ್‍, ಶ್ರೀ ಜೇಮ್ಸ್ (ಎತ್ತಗದಳ್ಳಿ), ಶ್ರೀ ವಿಲಿಯಂ, ಮೇರಿ ಟೀಚರ್‍ ಮತ್ತು ಹಂಚಲು ಸಹಾಯ ಮಾಡಿದ ರಾಯಪ್ಪ ಮಾಸ್ಟರ್‍ ಮತ್ತು ಶ್ರೀ ಅಂತುರಾಜ್‍, ಶ್ರೀ ಅಂತೋಣಿ ಮತ್ತು ತಂಡದ ಎಲ್ಲರಿಗೂ ಧನ್ಯವಾದಗಳು.
 • ಬಲಿಪೂಜೆಯ ನಂತರ ವಿನ್ಸೆಂಟ್‍ ದೆಪೌಲ್‍ ಸಭೆಯ ಸದಸ್ಯರು ಕಾಣಿಕೆ ಸಂಗ್ರಹಿಸುತ್ತಾರೆ, ಸಹಾಯ ನೀಡುವಂತೆ ಕೇಳಿಕೊಳ್ಳುತ್ತೇನೆ.
 • ಕುಟುಂಬ ವರದಿ ಪುಸ್ತಕಗಳನ್ನು ನೀಡಲು ಮಾಹಿತಿ ಸಂಗ್ರಹಿಸಲು ನಿಮಗೆ ನೀಡಿದ್ದ ಪತ್ರಗಳಲ್ಲಿ ಮಾಹಿತಿ ಭರ್ತಿಮಾಡಿ ವಲಯದ ಪಾಲನ ಸಮಿತಿಯ ಸದಸ್ಯರ ಮೂಲಕ ಹಿಂತಿರುಗಿಸುವಂತೆ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ.
 • ಧನ್ಯವಾದಗಳು
 • ಸಹಿ